HEALTH TIPS

ಲೋಕಸಭೆ ಅಧಿವೇಶನದಿಂದ ಪ್ರತಿಪಕ್ಷಗಳು ಹೊರನಡೆದಿದ್ದೇಕೆ?; ಸಭಾತ್ಯಾಗಕ್ಕೆ ಕಾರಣವಾದ ಬೇಡಿಕೆ ಏನು.. ಇಲ್ಲಿದೆ ಡೀಟೇಲ್ಸ್​

          ವದೆಹಲಿ: ಸತತ ಮೂರನೇ ಬಾರಿಗೆ ಮೋದಿ ಸರ್ಕಾರ ರಚನೆಯಾದ ನಂತರ ಜೂನ್ 24 ರಿಂದ ಜುಲೈ 3ರವರೆಗೆ ಸಂಸತ್ತಿನ ವಿಶೇಷ ಅಧಿವೇಶನ ನಡೆಯುತ್ತಿದೆ. ಅಧಿವೇಶನ ಪ್ರಾರಂಭವಾದ ಬಳಿಕ ಲೋಕಸಭೆಗೆ ನೂತನವಾಗಿ ಆಯ್ಕೆಯಾದ ಸಂಸದರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಿತು. ಇದಾದ ಬಳಿಕ ಸಂಸತ್ತಿನ ಜಂಟಿ ಅಧಿವೇಶನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ ಮಾಡಲಾಗಿದ್ದು, ಇದೀಗ ರಾಷ್ಟ್ರಪತಿಗಳ ಭಾಷಣಕ್ಕೆ ಧನ್ಯವಾದ ನಿರ್ಣಯದ ಕುರಿತು ಚರ್ಚೆ ನಡೆಯುತ್ತಿದೆ.

           ಈ ಸಂದರ್ಭದಲ್ಲಿ I.N.D.I.A ಮೈತ್ರಿಕೂಟದ ಸದಸ್ಯರು ಸೋಮವಾರ (ಜುಲೈ 1) ಲೋಕಸಭೆಯಲ್ಲಿ ಪ್ರತ್ಯೇಕವಾಗಿ ಒಂದು ದಿನ ನೀಟ್ ಪತ್ರಿಕೆ ಸೋರಿಕೆ ವಿಷಯದ ಚರ್ಚೆಗೆ ಅವಕಾಶ ನೀಡುವಂತೆ ಒತ್ತಾಯಿಸಿದರು. ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್​ಗಾಂಧಿ, ನೀಟ್ ಕುರಿತು ಒಂದು ದಿನದ ಚರ್ಚೆಯನ್ನು ಬಯಸಿದ್ದೇವೆ. ನೀಟ್​ ವಿಷಯ ಸಂಸತ್ತಿಗೆ ಮುಖ್ಯವಾಗಿದೆ. 70 ಪ್ರಕರಣಗಳಲ್ಲಿ ಪೇಪರ್ ಸೋರಿಕೆಯಾಗಿದೆ. ಇದರಿಂದ ಎರಡು ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ತೊಂದರೆಗೀಡಾಗಿದ್ದಾರೆ. ಈ ವಿಷಯದ ಬಗ್ಗೆ ಪ್ರತ್ಯೇಕ ಚರ್ಚೆಗೆ ನೀವು ಅವಕಾಶ ನೀಡಿದರೆ ಸಂತೋಷವಾಗುತ್ತದೆ ಎಂದು ಹೇಳಿದರು.

              ರಾಹುಲ್​ ಗಾಂಧಿ ಅವರ ಬೇಡಿಕೆಗೆ ಪ್ರತಿಕ್ರಿಯಿಸಿದ ರಕ್ಷಣಾ ಸಚಿವ ರಾಜನಾಥ್​ ಸಿಂಗ್​​, ಸಂಸತ್ತಿನ ಕಲಾಪಗಳು ಕೆಲವು ನಿಯಮಗಳು ಮತ್ತು ಸಂಪ್ರದಾಯಗಳ ಆಧಾರದ ಮೇಲೆ ನಡೆಯುತ್ತವೆ. ನಾನು ದಶಕಗಳ ಕಾಲ ಸಂಸದನಾಗಿದ್ದ ಅವಧಿಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ಧನ್ಯವಾದ ಸಲ್ಲಿಸುವ ಸಂದರ್ಭದಲ್ಲಿ ಬೇರೆ ಯಾವುದೇ ವಿಷಯ ಪ್ರಸ್ತಾಪವಾಗಿಲ್ಲ. ಧನ್ಯವಾದ ನಿರ್ಣಯ ಅಂಗೀಕರಿಸಿದ ನಂತರ ಇತರ ಸಮಸ್ಯೆಗಳನ್ನು ಎತ್ತಬಹುದು ಎಂದರು.

              ಧನ್ಯವಾದ ನಿರ್ಣಯದ ಮೇಲಿನ ಚರ್ಚೆಯ ನಂತರ ಸದನವು ಈ ವಿಷಯವನ್ನು ಚರ್ಚಿಸಬೇಕೆಂದು ವಿರೋಧ ಪಕ್ಷದ ನಾಯಕರು ಒತ್ತಾಯಿಸಿದರು ಮತ್ತು ಸರ್ಕಾರದಿಂದ ಭರವಸೆಯನ್ನು ಕೋರಿದರು. ಆದರೆ ವಂದನಾ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಬೇರೆ ಯಾವುದೇ ಚರ್ಚೆಯನ್ನು ಕೈಗೆತ್ತಿಕೊಳ್ಳುವ ಸಂಪ್ರದಾಯವಿಲ್ಲ ಮತ್ತು ಸದಸ್ಯರು ನೀಟ್ ಕುರಿತು ಚರ್ಚೆಗೆ ಪ್ರತ್ಯೇಕ ನೋಟಿಸ್ ನೀಡಬಹುದು ಎಂದು ಸ್ಪೀಕರ್ ಓಂ ಬಿರ್ಲಾ ಹೇಳಿದರು.

                ಬಿಜೆಪಿ ಸಂಸದ ಅನುರಾಗ್ ಠಾಕೂರ್ ಅವರನ್ನು ವಂದನಾ ನಿರ್ಣಯದ ಮೇಲಿನ ಚರ್ಚೆಯನ್ನು ಆರಂಭಿಸುವಂತೆ ಸಭಾಪತಿ ಕೇಳಿದಾಗ ಪ್ರತಿಪಕ್ಷಗಳು ಸರ್ಕಾರದಿಂದ ಸ್ಪಷ್ಟ ಭರವಸೆ ನೀಡುವಂತೆ ಒತ್ತಾಯಿಸಿ ಲೋಕಸಭೆಯಿಂದ ಹೊರನಡೆದವು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries