HEALTH TIPS

ಅಂಗವಿಕಲರ ಬಗ್ಗೆ ಪೂರ್ವಗ್ರಹ ಸಲ್ಲದು: ಸುಪ್ರೀಂ ಕೋರ್ಟ್

         ವದೆಹಲಿ: ಚಲನಚಿತ್ರಗಳು ಮತ್ತು ದೃಶ್ಯ ಮಾಧ್ಯಮಗಳಲ್ಲಿ ಅಂಗವಿಕಲರನ್ನು ಪೂರ್ವಗ್ರಹಪೀಡಿತರಾಗಿ ಚಿತ್ರಿಸುವುದು ಅವರ ಬಗೆಗಿನ ತಾರತಮ್ಯ ಮತ್ತು ಅಸಮಾನತೆಯನ್ನು ಶಾಶ್ವತಗೊಳಿಸುತ್ತದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

        ಅಂಗವಿಲಕರ ಬಗ್ಗೆ ತಪ್ಪುಗ್ರಹಿಕೆ ಉಂಟುಮಾಡುವ ಚಿತ್ರಣ ನೀಡುವುದರಿಂದ ಮತ್ತು ಅವರನ್ನು ಗೇಲಿ ಮಾಡುವ ಭಾಷೆ ಬಳಸುವುದರಿಂದ ದೂರವಿರುವಂತೆ ಚಲನಚಿತ್ರ ನಿರ್ಮಾಪಕರಿಗೆ ಸೂಚಿಸಿತು.

ಅಂಗವಿಕರಿಗೆ ಸಂಬಂಧಿಸಿದ ಮಾಹಿತಿಗಳನ್ನು ಒದಗಿಸುವಾಗ ಬಳಸುವ ಭಾಷೆಯ ಬಗ್ಗೆ ಎಚ್ಚರ ವಹಿಸಬೇಕು. ಅವರನ್ನು ಅವಹೇಳನ ಮಾಡುವ ಹಾಗೂ ಮತ್ತಷ್ಟು ಕಡೆಗಣಿಸುವಂತಹ ಭಾಷೆಗಳನ್ನು ಬಳಸಬಾರದು ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರಿದ್ದ ಪೀಠ ತಿಳಿಸಿತು.

ದೃಶ್ಯ ಮಾಧ್ಯಮಗಳು ಅಂಗವಿಕಲರ ಜೀವನದ ವಾಸ್ತವ ಅಂಶಗಳನ್ನು ಚಿತ್ರಿಸಲು ಶ್ರಮಿಸಬೇಕು. ಅವರು ಎದುರಿಸುತ್ತಿರುವ ಸವಾಲುಗಳನ್ನು ಮಾತ್ರವಲ್ಲದೆ ಅವರು ಸಾಧಿಸಿದ ಯಶಸ್ಸು, ಪ್ರತಿಭೆ ಮತ್ತು ಸಮಾಜಕ್ಕೆ ನೀಡಿರುವ ಕೊಡುಗೆಗಳನ್ನೂ ಚಿತ್ರಿಸಬೇಕು. ಈ ರೀತಿ ಮಾಡಿದರೆ, ಅವರ ಬಗೆಗಿನ ಪೂರ್ವಗ್ರಹಗಳನ್ನು ಹೋಗಲಾಡಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟಿತು.

ಹಿಂದಿ ಚಲನಚಿತ್ರ 'ಆಂಖ್ ಮಿಚೋಲಿ'ಯಲ್ಲಿ ಅಂಗವಿಕಲರನ್ನು ಅವಹೇಳನಕಾರಿಯಾಗಿ ಚಿತ್ರಿಸಲಾಗಿದೆ ಎಂದು ಆರೋಪಿಸಿ ನಿಪುನ್‌ ಮಲ್ಹೋತ್ರ ಎಂಬವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಪೀಠವು ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries