ಕಾಸರಗೋಡು: ಇನ್‌ಸ್ಟಾಗ್ರಾಮ್ ಮೂಲಕ ಪರಿಚಯಮಾಡಿಕೊಂಡು, ನಂತರ ಹನಿಟ್ರಾಪ್‌ನಲ್ಲಿ ಸಿಲುಕಿಸಿ ಯುವಕನಿಂದ ಚಿನ್ನ ಮತ್ತು ಹಣ ವಸೂಲಿಮಾಡಿದ ಪ್ರಕರಣಕ್ಕೆ ಸಂಬAಧಿಸಿ ಬಂಧಿತೆಯಾಗಿರುವ ಚೆಮ್ನಾಡ್ ಕೊಂಬನಡ್ಕ ನಿವಾಸಿ ಶ್ರುತಿ ಚಂದ್ರಶೇಖರ್ ಎಂಬಾಕೆ ವಿರುದ್ಧ ಕಾಸರಗೋಡು ನಗರಠಾಣೆ ಪೊಲೀಸರು ಮತ್ತೊಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೈಲಾಟಿ ಕಿಳಕ್ಕೇಕರ ನಿವಾಸಿ ದೇವಿದಾಸ್ ಎಂಬವರ ದಊರಿನ ಮೇರೆಗೆ ಈ ಕೇಸು. ತನ್ನಿಂದ ೭೩ಸಾವಿರ ರೂ. ನಗದು ಹಾಗೂ ೮೩.೮೩ಗ್ರಾಂ ಚಿನ್ನ ಪಡೆದು ವಾಪಾಸುಮಾಡದೆ ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಪ್ರಕರಣವೊಂದಕ್ಕೆ ಸಂಬAಧಿಸಿ ಉಡುಪಿಯಲ್ಲಿ ತಲೆಮರೆಸಿಕೊಂಡು ವಾಸಿಸುತ್ತಿದ್ದ ಈಕೆಯನ್ನು ಮೇಲ್ಪರಂಬ ಠಾಣೆ ಪೊಲೀಸರು ಅಲ್ಲಿನ ಪೊಲೀಸರ ನೆರವಿನಿಂದ ಇತ್ತೀಚೆಗೆ ಬಂಧಿಸಿದ್ದರು.