ಪೆರ್ಲ: ಪಡ್ರೆ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವೈದ್ಯರ ದಿನಾಚರಣೆ ನಡೆಯಿತು. ಸ್ಥಳೀಯ ಪ್ರಖ್ಯಾತ ವೈದ್ಯರಾದ ಡಾ.ಮೋಹನ್ ಕುಮಾರ್ ವೈಎಸ್ ಅವರಿಗೆ ಹೂಗುಚ್ಚ ನೀಡಿ ಗೌರವಿಸಲಾಯಿತು. ಈ ಸಂದರ್ಭ ವೈದ್ಯರು ಆಹಾರ ಜನ್ಯ ರೋಗಗಳ ಬಗ್ಗೆ, ಅಮಲು ಪದಾರ್ಥಗಳಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಿದರು.
ಏಳನೇ ತರಗತಿ ವಿದ್ಯಾರ್ಥಿ ಅನ್ವಿತ್ .ಬಿ. ವೈದ್ಯರ ದಿನದ ಇತಿಹಾಸ ಮತ್ತು ಮಹತ್ವದ ಕುರಿತಾದ ಮಾಹಿತಿಗಳನ್ನು ನೀಡಿದರು. ಮುಖ್ಯಶಿಕ್ಷಕ ವಾಸುದೇವ ನಾಯಕ್ ಸ್ವಾಗತಿಸಿ, ಹಿರಿಯ ಶಿಕ್ಷಕಿ ಸರಸ್ವತಿ. ಕೆ.ಎನ್ ವಂದಿಸಿದರು. ಅಧ್ಯಾಪಕ ಸಿಬ್ಬಂದಿಗಳು ಉಪಸ್ಥಿತರಿದ್ದರು.