HEALTH TIPS

ಕುಂಬಳೆ ಪಂಚಾಯತಿಯ ಆರ್ಥಿಕ ಅವ್ಯವಹಾರ: ಅಧ್ಯಕ್ಷೆ ರಾಜೀನಾಮೆ ನೀಡಿ ತನಿಖೆ ಎದುರಿಸಲಿ: ಬಿಜೆಪಿ ಆಗ್ರಹ

                  ಕುಂಬಳೆ: ಕುಂಬಳೆ ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಆರ್ಥಿಕ ಅವ್ಯವಹಾರ  ಗ್ರಾ.ಪಂ. ಅಧ್ಯಕ್ಷರ ಅರಿವಿನಿಂದಲೇ ನಡೆದಿದ್ದು, ಅಧ್ಯಕ್ಷೆ ರಾಜೀನಾಮೆ ನೀಡುವ ಮೂಲಕ ತನಿಖೆ ಎದುರಿಸಲು ಸಿದ್ಧರಾಗಬೇಕು ಎಂದು ಕುಂಬಳೆ ಪಂಚಾಯತಿ ಬಿಜೆಪಿ ಸಮಿತಿ ಕುಂಬಳೆ ಪ್ರೆಸ್ ಪೋರಂನಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

                 ೧೧ ಲಕ್ಷ ರೂ.ಗೂ ಅಧಿಕ ಮೊತ್ತದ ಅವ್ಯವಹಾರಕ್ಕೆ ಲೆಕ್ಕಾಧಿಕಾರಿಯನ್ನೇ ಹೊಣೆಗಾರರನ್ನಾಗಿಸಿ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಪಾರಾಗಲು ಯತ್ನಿಸುತ್ತಿದೆ. ಲಕ್ಷಗಟ್ಟಲೆ ಅವ್ಯವಹಾರ ನಡೆದಿರುವುದು ಅಧ್ಯಕ್ಷರಿಗೆ ತಿಳಿಯದಿರುವುದು ಪಂಚಾಯಿತಿಯ ಜನರನ್ನು ಮೂರ್ಖರನ್ನಾಗಿಸುವುದಕ್ಕೆ ಸಮಾನವಾಗಿದೆ. ಈ ಘಟನೆ ಹೊರ ಬಿದ್ದಾಗಿನಿಂದಲೂ ನಿಗೂಢವಾಗಿಯೇ ಇದೆ. ಅಧ್ಯಕ್ಷರು ಮತ್ತು ಆಡಳಿತವನ್ನು ಮುನ್ನಡೆಸುವವರ ಚರ್ಯೆಗಳು ಅವರು ಯಾವುದೋ ಭಯದಲ್ಲಿದ್ದಾರೆ ಎಂಬುದನ್ನು ಸೂಚಿಸುತ್ತಿದೆ. ಮೊದಲು ಐದು ಲಕ್ಷ ರೂಪಾಯಿ ದುರ್ವಿನಿಯೋಗವಾಗಿದೆ ಎಂದು ಹೇಳಲಾಗಿತ್ತಾದರೂ ನಂತರ ಮಾಧ್ಯಮಗಳ ಮುಂದೆ ಸತ್ಯ ಘಟನೆ ಬದಲಾಯಿತು. ಗುರುವಾರ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಅಧ್ಯಕ್ಷರು ವಿಜಿಲೆನ್ಸ್ಗೆ ದೂರು ನೀಡಿದ್ದು, ಎರಡು ದಿನಗಳ ನಂತರ ದೂರು ನೀಡಲಾಗಿದೆ ಎಂದು ತಿಳಿಸಿದರು. ಅವರು ಎಲ್ಲದರ ಬಗ್ಗೆ ಸುಳ್ಳು ಹೇಳುತ್ತಾರೆ. ಪಂಚಾಯಿತಿ ಭ್ರಷ್ಟರ ಸ್ವರ್ಗವಾಗಿದೆ. ಬೇನಾಮಿ ಮೂಲಕ ಅನೇಕ ಕೆಲಸಗಳು ನಡೆಯುತ್ತಿವೆ. ಭ್ರಷ್ಟಾಚಾರದ ವಿಚಾರದಲ್ಲಿ ಸಿಪಿಎಂ ಮತ್ತು ಎಸ್‌ಡಿಪಿಐ ಎರಡೂ ಆಡಳಿತಪಕ್ಷದ  ಜೊತೆಯಲ್ಲಿವೆ. ವಿಜಿಲೆನ್ಸ್ಗೆ ದೂರು ನೀಡಲು ಅಧ್ಯಕ್ಷರ ಜೊತೆಗಿದ್ದ ಸಿಪಿಎಂ ಸದಸ್ಯರ ಪಕ್ಷ ಪಂಚಾಯಿತಿ ಕಚೇರಿ ಮೆರವಣಿಗೆ ನಡೆಸುತ್ತಿರುವುದು ವಿಪರ್ಯಾಸ. ಹಣಕಾಸು ಅವ್ಯವಹಾರ ಬೆಳಕಿಗೆ ಬಂದ ನಂತರ ಕರೆದಿದ್ದ ತುರ್ತು ಮಂಡಳಿ ಸಭೆಗೆ ಇಬ್ಬರು ಸ್ಥಾಯೀ ಸಮಿತಿ ಅಧ್ಯಕ್ಷರು ಹಾಜರಾಗಿಲ್ಲ, ಆಡಳಿತ ಸಮಿತಿಯ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಪ್ರತಿಭಟಿಸಿದೆ. ಬಳಿಕ ಅವರನ್ನು ಪಂಚಾಯತಿ ಪರಿಸರದಲ್ಲಿ ಕಾಣಿಸುತ್ತಿಲ್ಲ. ಅವರೂ ಸಹ ಆರೋಪಿಗಳಾಗಿದ್ದಾರೆ ಎಂದು ಬಿಜೆಪಿ ಶಂಕಿಸಿದೆ.

                    ಈ ಆಡಳಿತ ಮಂಡಳಿಯ ಅವಧಿಯಲ್ಲಿನ ಎಲ್ಲ ಹಣಕಾಸು ವ್ಯವಹಾರಗಳನ್ನು ವಿಜಿಲೆನ್ಸ್ ತನಿಖೆಗೆ ಒಳಪಡಿಸಬೇಕು. ಇದನ್ನು ಎತ್ತಿ ಹಿಡಿದು ಬಿಜೆಪಿ ವಿಜಿಲೆನ್ಸ್ಗೆ ದೂರು ನೀಡಲಿದೆ. ಅಧ್ಯಕ್ಷರು ರಾಜೀನಾಮೆ ನೀಡದಿದ್ದರೆ ಬಿಜೆಪಿ ನೇತೃತ್ವದಲ್ಲಿ ಪಂಚಾಯಿತಿ ಕಚೇರಿ ಮೆರವಣಿಗೆ ಮತ್ತಿತರ ಪ್ರತಿಭಟನಾ ಕಾರ್ಯಕ್ರಮಗಳು ನಡೆಯಲಿವೆ ಎಂದು ಬಿಜೆಪಿ ಪದಾಧಿಕಾರಿಗಳು ಎಚ್ಚರಿಸಿರುವರು. 

                 ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಕುಂಬಳೆ ಪಂಚಾಯತಿ ದಕ್ಷಿಣ ವಲಯ ಅಧ್ಯಕ್ಷ ಸುಜಿತ್ ರೈ, ಉತ್ತರ ವಲಯ ಅಧ್ಯಕ್ಷ ಪ್ರದೀಪ್ ಕುಮಾರ್, ಬಿಜೆಪಿ ಕುಂಬಳೆ ಪಂಚಾಯತಿ ಸಮಿತಿ ಕಾರ್ಯದರ್ಶಿ ವಿವೇಕಾನಂದ ಶೆಟ್ಟಿ, ಪಂಚಾಯತಿ ಸದಸ್ಯರಾದ ಪ್ರೇಮಲತಾ ಎಸ್. ಮತ್ತು ಮೋಹನ್ ಕೆ. ಉಪಸ್ಥಿತರಿದ್ದು ಭ್ರಷ್ಟಾಚಾರದ ಬಗ್ಗೆ ಮಾಹಿತಿ ನೀಡಿದರು. 


    

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries