ಕೊಚ್ಚಿ: ಬಾಲ್ಯ ವಿವಾಹ ತಡೆಗೆ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ಕೇರಳ ಹೈಕೋರ್ಟ್ ಹೇಳಿದೆ. ಈ ಕಾಯಿದೆ ಎಲ್ಲಾ ಭಾರತೀಯರಿಗೂ ಅನ್ವಯಿಸುತ್ತದೆ.
ಯಾವುದೇ ಧಾರ್ಮಿಕ ನಿಷೇಧಗಳನ್ನು ಸ್ವೀಕರಿಸುವುದಿಲ್ಲ ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆ, ೨೦೦೬ ಮುಸ್ಲಿಮರಿಗೂ ಅನ್ವಯಿಸುತ್ತದೆ ಎಂದು ಹೈಕೋರ್ಟ್ ಹೇಳಿದೆ.
ವಡಕಂಚೇರಿ ಪೋಲೀಸರು ದಾಖಲಿಸಿರುವ ಪ್ರಕರಣ ರದ್ದು ಕೋರಿ ಸ್ವೀಕೃತವಾದ ಅರ್ಜಿಯನ್ನು ಆಧರಿಸಿ ನ್ಯಾಯಾಲಯದ ಕ್ರಮವಾಗಿದೆ. ನ್ಯಾಯಮೂರ್ತಿ ಪಿ.ವಿ. ಕುಂಞÂ್ಞ ಕೃಷ್ಣನ್ ನೇತೃತ್ವದ ಪೀಠ ಈ ತೀರ್ಪು ನೀಡಿದೆ. ವೈಯಕ್ತಿಕ ಕಾನೂನಿನಡಿಯಲ್ಲಿ ೧೫ ವರ್ಷದ ಬಾಲಕಿಯನ್ನು ವಿವಾಹವಾಗುವಂತಿಲ್ಲ, ಇದು ಕಾನೂನುಬದ್ಧವಾಗಿ ತಪ್ಪು ಮತ್ತು ೧೮ ವರ್ಷಗಳು ಮಕ್ಕಳ ಮದುವೆಯ ವಯಸ್ಸು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಇನ್ನು ಮುಂದೆ ಎಳೆಯ ಬಾಲಕಿಯರÀನ್ನು ಮದುವೆಯಾಗುವ ಮುಸ್ಲಿಂ ಸಮುದಾಯದ ಸದಸ್ಯರಿಗೆ ಕಾನೂನು ರಕ್ಷಣೆ ಸಿಗುವುದಿಲ್ಲ. ಈ ಹಿಂದೆ ಮುಸ್ಲಿಂ ವೈಯಕ್ತಿಕ ಕಾನೂನಿನಿಂದ ಬಾಲ್ಯ ವಿವಾಹ ಸಾಧ್ಯವಿತ್ತು.
ಹೆಣ್ಣು ಪ್ರಾಯಕ್ಕೆ ಬಂದ ಮೇಲೆ ಮದುವೆಗೆ ಅರ್ಹಳಾಗುತ್ತಾಳೆ ಎಂಬ ಮುಸ್ಲಿಂ ವೈಯಕ್ತಿಕ ಕಾನೂನು ಇನ್ನು ಮುಂದೆ ಬಾಲ್ಯ ವಿವಾಹಕ್ಕೆ ಸಮರ್ಥನೆಯಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟ್ಟಪಡಿಸಿದೆ. ಶಿಶು ಕಾನೂನಿನ ಪ್ರಕರಣದಲ್ಲಿ ಮುಸ್ಲಿಂ ವೈಯಕ್ತಿಕ ಕಾನೂನು ಇನ್ನು ಮುಂದೆ ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ವಿವರಿಸುತ್ತದೆ.
ಕೇರಳ ಹೈಕೋರ್ಟ್ ತೀರ್ಪಿನ ಪ್ರಕಾರ, ಕಾನೂನು ಮತ್ತು ಧರ್ಮವು ಎರಡನೆಯ ಸ್ಥಾನ ಪಡೆಯುವ ಮೊದಲು ಪೌರತ್ವವು ಅತ್ಯುನ್ನತವಾಗಿದೆ.