ಕಾಸರಗೋಡು : ಅಖಿಲ ಭಾರತ ಗ್ರಾಮೀಣ ಗ್ರಾಮೀಣ ಡಾಕ್ ಸೇವಕ್(ಜಿಡಿಎಸ್) ಒಕ್ಕೂಟದ ಕಾಸರಗೋಡು ಜಿಲ್ಲಾ ಸಮಿತಿ ರಚನೆ ಹಾಗೂ ಪ್ರಥಮ ಜಿಲ್ಲಾ ಸಭೆ ಕಾಞಂಗಾಡಿನಲ್ಲಿ ನಡೆಯಿತು. ಹೊಸದುರ್ಗ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಜಿಡಿಎಸ್ ಯೂನಿಯನ್ ವೃತ್ತದ ಕೋಶಾಧಿಕಾರಿ ಪಿ.ಮೋಹನನ್ ಉದ್ಘಾಟಿಸಿದರು. ಸಿ.ರಾಘವನ್, ಕೆ.ಹರಿ, ಬಾಬುರಾಜನ್ ಕೆ.ಆರ್, ಕೆ.ವಿ.ವಿನ್ಸೆಂಟ್, ಶರತ್ ಪಿ.ವಿ, ಕೆ.ಪಿ ಪ್ರೇಮಕುಮಾರ್, ಕೆ.ಉಣ್ಣಿಕೃಷ್ಣನ್ ಮತ್ತು ಓ.ರಾಜೀವನ್ ಉಪಸ್ಥಿತರಿದ್ದರು. ಜಿಡಿಎಸ್ ನೌಕರರನ್ನು ಪೌರಕಾರ್ಮಿಕರಾಗಿ ಅಂಗೀಕರಿಸಬೇಖು, ಅವೈಜ್ಞಾನಿಕ ಟಾರ್ಗೆಟ್ ವಿಧಿಸುವುದನ್ನು ಕೊನೆಗೊಳಿಸಬೇಕು ಮತ್ತು ಜಿಡಿಎಸ್ ನೌಕರರಿಗೆ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂಬ ಬೇಡಿಕೆಗಳನ್ನು ಸಮಾವೇಶದಲ್ಲಿ ಪ್ರಸ್ತಾಪಿಸಲಾಯಿತು. ವಿ.ವಿ.ರಾಜನ್ ಸ್ವಾಗತಿಸಿದರು. ಪಿ.ಪಿ.ಕಿರಣ್ ವಂದಿಸಿದರು.
ಈ ಸಂದರ್ಭ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಸಿ.ವಿ ರಾಜನ್ ಅಧ್ಯಕ್ಷ, ಸಿ.ರಾಘವನ್ ಕಾರ್ಯದರ್ಶಿ ಹಾಗೂ ಪಿ. ಕಿರಣ್ ಅವರನ್ನು ಕೋಶಾಧಿಕಾರಿಯನ್ನಾಗಿ ಆಯ್ಕೆ ಮಾಡಲಾಯಿತು.