ಕಣ್ಣೂರು: ಮಾಟ-ಮಂತ್ರ ವಿಶ್ವಾಸದ ಮೇಲೆ ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಅವರನ್ನು ಲೇವಡಿ ಮಾಡಿ ಅವರ ಪುತ್ರ ಫೇಸ್ ಬುಕ್ ಪೋಸ್ಟ್. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಪೋಸ್ಟ್‍ನಲ್ಲಿ, ಅಮಲ್ ಉಣ್ಣಿತ್ತಾನ್ ಅವರು, ಮಾಟ-ಮಂತ್ರದಲ್ಲಿ ನಂಬಿಕೆಯು ಮಾನಸಿಕ ಕಾಯಿಲೆಯಾಗಿದೆ ಮತ್ತು ಇದನ್ನು ಮಾಡುವವರನ್ನು ವಂಚಕರೆಂದು ಕರೆಯಬಹುದೆಂದು ತಿಳಿಸಿದ್ದಾರೆ.
"ಮಾಟ-ಟಭಿಚಾರಗಳು ಮತ್ತು ಇತರ ಪ್ರತಿಗಾಮಿ ಆಚರಣೆಗಳನ್ನು ನಂಬುವ ವ್ಯಕ್ತಿಗಳು ಇನ್ನೂ ಇದ್ದಾರೆ. ಇದು ಸಮಾಜದ ಮನಸ್ಥಿತಿಯನ್ನು ಅಡ್ಡಿಪಡಿಸುವ ಮನಸ್ಥಿತಿಯಾಗಿದೆ. ಅಂತಹ ನಂಬಿಕೆಗಳು ಅಸ್ತಿತ್ವದಲ್ಲಿರುವುದು ಕಳವಳಕಾರಿ ಮತ್ತು ಖಿನ್ನತೆಯನ್ನುಂಟುಮಾಡುತ್ತದೆ. ಈ ದೃಷ್ಟಿಕೋನಗಳನ್ನು ಹೊಂದಿರುವವರು ಹಳತಾದವರು ಮತ್ತು ಸಮಾಜವಾಗಿ ನಮ್ಮ ಪ್ರಗತಿಗೆ ಅಡ್ಡಿಯಾಗುತ್ತಾರೆ. ಈ ಸಂಪ್ರದಾಯಗಳಲ್ಲಿ ತೊಡಗಿಸಿಕೊಳ್ಳುವ ಜನರು ತಮ್ಮ ಸ್ವಂತ ಲಾಭಕ್ಕಾಗಿ ಅಜ್ಞಾನ ಮತ್ತು ಭಯದಿಂದ ಬೇಟೆಯಾಡುತ್ತಾg.É ಇದು ನಂಬುವವರಿಗೆ ಮಾತ್ರ ಪರಿಣಾಮ ಬೀರುತ್ತದೆ ಎಂದು ಅಮಲ್ ಫೇಸ್‍ಬುಕ್‍ನಲ್ಲಿ ಹೇಳಿದ್ದಾರೆ.
ರಾಜ್‍ಮೋಹನ್ ಉಣ್ಣಿತ್ತಾನ್ ಅವರು ಮಾಟ-ಮಂತ್ರಗಳಲ್ಲಿ ನಂಬಿಕೆ ಹೊಂದಿದ್ದಾರೆ ಎಂದು ವಾಹಿನಿಯ ಕಾರ್ಯಕ್ರಮದ ವೇಳೆ ಹೇಳಿದ್ದರು. ನಂಬಿಕೆ ಇರುವವರಿಗೆ ಇದು ಕೆಲಸ ಮಾಡುತ್ತದೆ ಎಂದೂ ಉಣ್ಣಿತ್ತಾನ್ ವಿವರಿಸಿದ್ದರು. ಕೆಲ ದಿನಗಳ ಹಿಂದೆ ಕೆಪಿಸಿಸಿ ಅಧ್ಯಕ್ಷ ಕೆ.ಸುಧಾಕರನ್ ಅವರ ಮನೆಯಲ್ಲಿ ಉಣ್ಣಿತ್ತಾನ್ ಸಮ್ಮುಖದಲ್ಲಿ ಮಾಟ-ಮಂತ್ರ ಕ್ರಿಯೆಗಳು ನಡೆಸಿರುವುದು ಪತ್ತೆಯಾದ ವಿಡಿಯೋ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಲಾಗಿತ್ತು. ಇದರ ಬೆನ್ನಲ್ಲೇ ರಾಜಮೋಹನ್ ಉಣ್ಣಿತ್ತಾನ್ ಪುತ್ರನ ಅಭಿಪ್ರಾಯ ಹೊರಬಿದ್ದಿದೆ.