ನವದೆಹಲಿ: ವರ್ಷಗಳು ಕಳೆದಂತೆ ಜಗತ್ತು ಹೊಸ ಆವಿಷ್ಕಾರಗಳನ್ನು ನೋಡುತ್ತಿದ್ದು, ಪ್ರಪಂಚವು ಪ್ರತಿನಿತ್ಯ ಒಂದಿಲ್ಲೊಂದು ವಿಸ್ಮಯಕ್ಕೆ ಸಾಕ್ಷಿಯಾಗುತ್ತಿರುತ್ತದೆ. ಅದೇ ರೀತಿ ಮನುಷ್ಯರು ಕೂಡ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅರ್ಥಾತ್ AI ಕೂಡಾ ಒಂದು.
ಇದೀಗ AI ಬಳಸಿ ಜಾಗತಿಕ ನಾಯಕರ ಫ್ಯಾಷನ್ ಶೋ ನಡೆಸಲಾಗಿದ್ದು, ಇದು ಸಖತ್ ಸೌಂಡ್ ಮಾಡುತ್ತಿದೆ.
ಎಐ ಟೆಕ್ನಾಲಜಿಯು ಬೇರೆ ಬೇರೆ ವಲಯಗಳಲ್ಲಿ ಭಾರೀ ಸದ್ದು ಮಾಡುತ್ತಿದ್ದು,ಇದೀಗ ವಿಶ್ವ ನಾಯಕರ ಎಐ ಆಧಾರಿತ ಫ್ಯಾಶನ್ ಶೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಟೆಸ್ಲಾ ಸಿಇಒ ಎಲಾನ್ ಮಸ್ಕ್,ಪ್ರಧಾನಿ ನರೇಂದ್ರ ಮೋದಿ, ಡೊನಾಲ್ಡ್ ಟ್ರಂಪ್, ವ್ಲಾಡಿಮಿರ್ ಪುಟಿನ್ ಮತ್ತು ಮಾರ್ಕ್ ಜುಕರ್ ಬರ್ಗ್, ಸೇರಿದಂತೆ ವಿಶ್ವ ನಾಯಕರು ಹಾಗೂ ಜಾಗತಿಕ ವ್ಯಕ್ತಿಗಳು ರ್‍ಯಾಂಪ್ ವಾಕ್ ಮಾಡುತ್ತಿರುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಜುಲೈ 22ರಂದು ಅವರು ಪೋಸ್ಟ್ ಹಂಚಿಕೊಂಡಿದ್ದು, ಈವರೆಗೆ 45 ಮಿಲಿಯನ್ ವೀಕ್ಷಣೆಯನ್ನುಗಳಿಸಿದೆ. ಕಮಲಾ ಹ್ಯಾರಿಸ್, ಬರಾಕ್ ಒಬಾಮಾ, ಪೋಪ್ ಫ್ರಾನ್ಸಿಸ್, ಕ್ಸಿ ಜಿನ್ಪಿಂಗ್, ಉತ್ತರ ಕೊರಿಯಾದ ಕಿಮ್ ಜಾಂಗ್ ಉನ್, ಟಿಮ್ ಕುಕ್, ಬಿಲ್ ಗೇಟ್ಸ್ ಈ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.
ಪೋಪ್ ಫ್ರಾನ್ಸಿಸ್ ಬಿಳಿ ಜಾಕೆಟ್ನಲ್ಲಿ, ಪುಟಿನ್ ಹಾಫ್ ಶೋಲ್ಡರ್ ಲೂಯಿ ವಿಟಾನ್ ಉಡುಪಿನಲ್ಲಿ, ಬೈಡೆನ್ ಸೂಟ್ ನೊಂದಿಗೆ ಗಾಲಿಚೇರ್ನಲ್ಲಿ ಕಾಣಿಸಿಕೊಂಡರು. ಟ್ರಂಪ್ ಕಿತ್ತಳೆ ಬಣ್ಣದ ಡ್ರೆಸ್ ಧರಿಸಿದ್ದರು. ಕಿಮ್ ಜಾಂಗ್ ಉನ್ ಚಿನ್ನದ ನೆಕ್ಲೇಸ್ ಹೊಂದಿರುವ ಬ್ಯಾಗಿ ಹೂಡಿಯನ್ನು, ಪ್ರಧಾನಿ ಮೋದಿ ವಿಭಿನ್ನ ತರದ ಉಡುಗೆ ತೊಟ್ಟಿದ್ದರು.
ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ರನ್ ವೇ ಆಫ್ ಪವರ್ ಎಂಬ ಫಲಕವನ್ನು ಹಿಡಿದು ವಾಕ್ ಮಾಡುವುದನ್ನು ನಾವು ಮೂಲಕ ವೀಡಿಯೋದಲ್ಲಿ ನೋಡಬಹುದಾಗಿದೆ. ಇಂಟರ್ನೆಟ್ನಲ್ಲಿ ಈ ವಿಡಿಯೋ ಸಂಚಲನ ಮೂಡಿಸಿದ್ದು, ಈ ಫ್ಯಾಶನ್ ಶೋನ ವಿಜೇತ ಪ್ರಧಾನಿ ಮೋದಿ ಎಂದು ಹಲವರು ಕಮೆಂಟ್ ಮಾಡುತ್ತಿದ್ದಾರೆ.