ಕಾಸರಗೋಡು: ಆ್ಯಂಟಿಬಯೋಟಿಕ್ ಔಷಧಿಗಳ ಬಳಕೆಯ ಬಗ್ಗೆ ಸಾರ್ವಜನಿಕರಿಗೆ ತಿಳುವಳಿಕೆ ನೀಡುವ 'ಗೋ ಬ್ಲೂ ಅಭಿಯಾನ'ದ ಅಂಗವಾಗಿ ಕಾಞಂಗಾಡ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಆ್ಯಂಟಿಬಯೋಟಿಕ್ ಮಾತ್ರೆಗಳ ವಿತರಣೆಗೆ ಸೂಚನೆಗಳನ್ನು ಒಳಗೊಂಡ ನೀಲಿ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು.
ಕಾಞಂಗಾಡು ನಗರಸಭಾ ಅಧ್ಯಕ್ಷೆ ಸುಜಾತಾ ಟೀಚರ್, ಪ್ರತಿನಿಧಿ ಡಾ. ಸಂತೋಷ್ ಅವರಿಗೆ ನೀಲಿ ಲಕೋಟೆಯನ್ನು ಹಸ್ತಾಂತರಿಸಿ ಬಿಡುಗಡೆಗೊಳಿಸಲಾಯಿತು. ಜಿಲ್ಲಾ ನೋಡಲ್ ಅಧಿಕಾರಿ ಡಾ. ಬಿಪಿನ್, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸರಸ್ವತಿ, ಆಸ್ಪತ್ರೆ ಸಿಬ್ಬಂದಿ ಹಾಗೂ ನಗರಸಭೆ ಸಿಬ್ಬಂದಿ ಹಾಜರಿದ್ದರು.