HEALTH TIPS

ಮಲಬಾರ್ ಗೆ ಹೊಸದಾಗಿ ಮಂಜೂರಾಗಿರುವ ರೈಲು ಕಾಸರಗೋಡು, ಮಂಗಳೂರಿಗೆ ವಿಸ್ತರಿಸಲು ಸಂಸದ ಆಗ್ರಹ

                    ಕಾಸರಗೋಡು: ಮಲಬಾರ್ ಗೆ ಹೊಸದಾಗಿ ನಿಗದಿಪಡಿಸಲಾದ ರೈಲು ಸಂಖ್ಯೆ- 06031/06032 ಎಸ್‍ಆರ್‍ಆರ್-ಸಿಎಎನ್-ಎಸ್‍ಆರ್‍ಆರ್ ಕಾಯ್ದಿರಿಸದ ಎಕ್ಸ್‍ಪ್ರೆಸ್ ರೈಲುಗಳನ್ನು ಕಾಸರಗೋಡು (ಕೆಜಿಕ್ಯೂ) ಯಾ ಮಂಗಳೂರು (ಎಂಎಕ್ಯೂ) ವರೆಗೆ ವಿಸ್ತರಿಸುವುದು ಹಾಗೂ  ಲೋಕಸಭಾ ಕ್ಷೇತ್ರದ ಪ್ರಮುಖ ರೈಲು ನಿಲ್ದಾಣವಾಗಿರುವ  ಕಾಞಂಗಾಡ್ ರೈಲು ನಿಲ್ದಾಣದ ಕೆಲವೊಂದು ಬೇಡಿಕೆಗಳ ಕುರಿತು ಕೇಂದ್ರ ಸಚಿವರಿಗೆ ಪ್ರಸ್ತಾವನೆ ನೀಡಿ ನೇರ ಸಭೆ ನಡೆಸಿ ಚರ್ಚೆ ನಡೆಸಿರುವುದಾಗಿ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

                    ಕಾಸರಗೋಡು ಭಾಗದ ಸಾಮಾನ್ಯ ರೈಲು ಪ್ರಯಾಣಿಕರು ಎದುರಿಸುತ್ತಿರುವ ಸಂಕಷ್ಟಗಳಿಗೆ ಇದು ಪರಿಹಾರವಾಗಲಿದೆ. ಪ್ರಸಕ್ತ ಕಾಸರಗೋಡು ಕ್ಷೇತ್ರದಲ್ಲಿ ಶೋರ್ನೂರಿನಿಂದ ಕಾಸರಗೋಡಿಗೆ ಹೋಗುವ ಪ್ರಯಾಣಿಕರಿಗೆ ಮಂಗಳ ನೇತ್ರಾವತಿ ಎಕ್ಸ್‍ಪ್ರೆಸ್ ರೈಲುಗಳ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಇದು ಹೆಚ್ಚು ಪ್ರಯೋಜನಕಾರಿಯಾಗಿದೆ.ಸಂಜೆ 5 ಗಂಟೆಯ ನಂತರ ರೈಲು ಪ್ರಯಾಣದ ಸೌಲಭ್ಯ ಇಲ್ಲದ ಉತ್ತರ ಕೇರಳದ ಅತ್ಯಂತ ದೂರದಲ್ಲಿರುವ ಕಾಸರಗೋಡು ಅಥವಾ ಮಂಗಳೂರಿಗೆ ಈ ರೈಲನ್ನು ವಿಸ್ತರಿಸುವಂತೆ ಸಚಿವರನ್ನು ಭೇಟಿ ಮಾಡಿ ನೇರವಾಗಿ ಮನವಿ ಮಾಡಿರುವುದಾಗಿ ಸಂಸದರು ತಿಳಿಸಿದರು. 

                    ಅಲ್ಲದೆ, ವಂದೇ ಭಾರತ್ ರೈಲುಗಳ ಕಾರ್ಯಾಚರಣೆಗೆ ಸಂಬಂಧಿಸಿದಂತೆ, ಕಾಸರಗೋಡು ರೈಲು ನಿಲ್ದಾಣದಲ್ಲಿ ರೈಲುಗಳಿಗೆ ನೀರು ತುಂಬಿಸಲು ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ ಮತ್ತು ಇತರ ವ್ಯವಸ್ಥೆಗಳನ್ನೂ ಪರಿಗಣಿಸಬಹುದಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಕಾಸರಗೋಡು ಲೋಕಸಭಾ ಕ್ಷೇತ್ರದ ಪ್ರಮುಖ ನಿಲ್ದಾಣವಾಗಿರುವ ಕಾಞಂಗಾಡ್ ಮತ್ತು ಇತರ ನಿಲ್ದಾಣಗಳಲ್ಲಿನ ಸಮಸ್ಯೆಗಳ ಪರಿಹಾರಕ್ಕಾಗಿ ರೈಲ್ವೆ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಲಾಗುವುದು ಮತ್ತು ಈ ಬಗ್ಗೆ ಸಕಾರಾತ್ಮಕ ನಿರ್ಧಾರ ತೆಗೆದುಕೊಳ್ಳುವುದಾಗಿ ಸಚಿವರು ಭರವಸೆ ನೀಡಿರುವುದಾಗಿ ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries