ಶ್ರೀಕೃಷ್ಣನ ಅತ್ಯಪೂರ್ವ ಚಿತ್ರಗಳನ್ನು ಬಿಡಿಸುವ ಮೂಲಕ ಗುರುತಿಸಿಕೊಂಡಿರುವ ಮುಸ್ಲಿಂ ಸಮುದಾಯದ ಬಾಲಕಿ ಜೆಸ್ನಾ ಸಲೀಂ ಕೇರಳ ಸಹಿತ ದಕ್ಷಿಣ ಭಾರತದಾದ್ಯಂತ ಚಿರಪರಿಚಿತ. ಅವರು ನಟ ಸುರೇಶ್ ಗೋಪಿ ಅವರ ಆಪ್ತ ಗೆಳತಿ. ಪ್ರಧಾನಿ ನರೇಂದ್ರ ಮೋದಿ ಅವರು ಸುರೇಶ್ ಗೋಪಿ ಅವರ ಪುತ್ರಿಯ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದಾಗ, ಜೆಸ್ನಾ ಸಲೀಂ ಅವರು ಬಿಡಿಸಿದ ಶ್ರೀಕೃಷ್ಣನ ಚಿತ್ರವನ್ನು ಪ್ರಧಾನಿಯವರಿಗೆ ಖುದ್ದಾಗಿ ಉಡುಗೊರೆಯಾಗಿ ನೀಡಿ ಗಮನ ಸೆಳೆದಿದ್ದರು.
ಪ್ರಸ್ತುತ ಅದೇ ಜೆಸ್ನಾ ಸಲೀಂ ವಿರುದ್ಧ ಕೇರಳದಲ್ಲಿ ದೊಡ್ಡಮಟ್ಟಿನ ಸೈಬರ್ ದಾಳಿ ಹೆಚ್ಚುತ್ತಿದೆ. ಯೋಗಿ ಆದಿತ್ಯನಾಥ್ ಅವರು ಕೇರಳದ ಬಗ್ಗೆ ಹೇಳಿದ್ದು, ಅದು ಶೀಘ್ರದಲ್ಲೇ ಮತ್ತೊಂದು ಕಾಶ್ಮೀರವಾಗಲಿದೆ ಎಂಬ ಹೇಳಿಕೆಗಳು ಈ ಸಂದರ್ಭ ನೆನಪಾಗದಿರದು. ಅದರಲ್ಲೂ ಮುಸ್ಲಿಂ ಹುಡುಗಿಯೊಬ್ಬಳು ಮೋದಿಗೆ ಹತ್ತಿರವಾಗುವುದನ್ನು ಯಾರೂ ಅರಗಿಸಿಕೊಳ್ಳಲು ಸಾಧ್ಯವಿಲ್ಲ.
ಇತ್ತೀಚೆಗೆ ಹೆಚ್ಚು ಪ್ರಮಾಣದಲ್ಲಿ ಜೆಸ್ನಾ ವಿರುದ್ಧ ಸೈಬರ್ ದಾಳಿ ನಡೆಯುತ್ತಿದೆ. ಯುವಕರನ್ನು ಹನಿಟ್ರ್ಯಾಪ್‍ಗೆ ಸೆಳೆಯುವ ಹುಡುಗಿ ಜೆಸ್ನಾ ಎಂಬ ಪ್ರಚಾರ ಕೂಡ ನಡೆಯುತ್ತಿದೆ. ಜೆಸ್ನಾ ಸಲೀಂ ಅವರು ಇತ್ತೀಚೆಗೆ ಅತ್ಯಾಚಾರಕ್ಕೊಳಗಾದ ಘಟನೆಯನ್ನು ಬಹಿರಂಗಪಡಿಸಿದ್ದಾರೆ. ಮದರಸಾಕ್ಕೆ ಹೋಗುತ್ತಿದ್ದ ಪುತ್ರನಿನಿಗೆ ಮಾನಸಿಕ ಸಮಸ್ಯೆ ಇದ್ದುದನ್ನು ಕಂಡು ಏನು ಮಾಡುವುದು ಎಂದು ಯೋಚಿಸುತ್ತಿದ್ದ ಜೆಸ್ನಾ ಸಲೀಂ ಅವರಿಗೆ ರತೀಶ್ ಕಲ್ಯಾಣ್ ತನ್ನ ಸ್ನೇಹಿತ ನಿಮ್ಹಾನ್ಸ್‍ನಲ್ಲಿ ಓದಿರುವ ರೋಷನ್ ಎಂಬ ವೈದ್ಯನಿದ್ದು, ಆತನಿಂದ ವೈದ್ಯಕೀಯ ಸಲಹೆ ಪಡೆಯುವಂತೆ ಸಲಹೆ ನೀಡಿದ್ದಾನೆ. ಹಾಗಾಗಿ ತನ್ನ ಮಗನನ್ನು ಕೌನ್ಸೆಲಿಂಗ್‍ಗೆ ಕರೆದುಕೊಂಡು ಹೋದಾಗ ವೈದ್ಯನಂತ ನಟಿಸಿ ಜೆಸ್ನಾ ಸಲೀಂ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ. ಅಂದು ಜೆಸ್ನಾಗೆ ಕಿರುಕುಳ ನೀಡಿ ಬೆದರಿಸಿದ್ದರಿಂದ ಜೆಸ್ನಾ ಸಲೀಂ ದೂರು ನೀಡಿರಲಿಲ್ಲ. ಕಿರುಕುಳದ ದೃಶ್ಯಾವಳಿಗಳನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದು, ಅದನ್ನು ಬಹಿರಂಗಪಡಿಸಿದರೆ ಆ ದೃಶ್ಯಾವಳಿಗಳನ್ನು ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಮನೆಯಲ್ಲಿ ಕಟ್ಟಿಹಾಕಿ ಕಿರುಕುಳ ನೀಡಿದ್ದು, ಒಂಟಿಯಾಗಿ ವಾಸಿಸುವ ಹಲವು ಮಹಿಳೆಯರಿಗೆ ಇದೇ ರೀತಿ ಕಿರುಕುಳ ನೀಡಿದ್ದಾನೆ ಎಂದು ಜೆಸ್ನಾ ಹೇಳುತ್ತಾರೆ. ನನ್ನ ಮನೆಗೆ ಬಂದು ಕಿರುಕುಳ ನೀಡುತ್ತಿದ. ಆದರೆ ವಾಸ್ತವವಾಗಿ ಆತ ಮುಸ್ಲಿಂ ಯುವಕ. ಯುವಕ ವೈದ್ಯಕೀಯ ಕಾಲೇಜು ಬಳಿ ಇರುವ ಸಹಕಾರಿ ಬ್ಯಾಂಕ್‍ನಲ್ಲಿ ಕೆಲಸ ಮಾಡುವ ಮಹಿಳೆಯ ಮಗ. ನಾನು ಅವನ ತಾಯಿಗೆ ಈ ಎಲ್ಲಾ ವಿಷಯಗಳನ್ನು ಹೇಳಿದ್ದೇನೆ ಮತ್ತು ನಾನು ಏನೂ ಮಾಡಲಾರೆ, ನನ್ನ ಮಗ ರೋಗಿಯಾಗಿದ್ದಾನೆ ಎಂದು ಜೆಸ್ನಾ ಹೇಳಿದರು. ಹಲವು ಬಾರಿ ಹಣ ಕೇಳಿದ್ದ. ಅವನು ಆಗಾಗ್ಗೆ ಹೆದರಿಸುತ್ತಿದ್ದ. ದೂರು ನೀಡಿದರೂ ಪೋಲೀಸರು ಬಂಧಿಸಲಿಲ್ಲ ಎಂದು ಜೆಸ್ನಾ ಹೇಳುತ್ತಾರೆ.
ಇದೀಗ ಅದೇ ಯುವಕ ಹನಿಟ್ರ್ಯಾಪ್ ನಡೆಸುತ್ತಿರುವ ಮಹಿಳೆ ಜೆಸ್ನಾ ಸಲೀಂ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ. ಮುಜೀಬ್ ಎಂಬ ಉಸ್ತಾದ್ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ ನಂತರ ತನ್ನ ಮಗನಿಗೆ ಕೌನ್ಸಿಲಿಂಗ್ ಮಾಡಬೇಕಾಯಿತು ಎಂದು ಜೆಸ್ನಾ ಸಲೀಂ ಹೇಳುತ್ತಾರೆ. ಅದೇನೇ ಇರಲಿ, ಜೆಸ್ನಾ ಸಲೀಂ ಅವರ ಈ ಹೇಳಿಕೆ ಸಮಾಜವನ್ನು ಬೆಚ್ಚಿ ಬೀಳಿಸಿದೆ. ಅನ್ಯ ಧರ್ಮದ ಶ್ರೀಕೃಷ್ಣನ ಚಿತ್ರ ಬಿಡಿಸಿ ಖ್ಯಾತಿಗೊಂಡಿರುವ ನನ್ನ ಪ್ರಗತಿ ಸಹಿಸದೆ ನನ್ನನ್ನು ಹೀಗೆ ಹಿಂಸಿಸುತ್ತಿದ್ದಾನೆ’- ಅಳುತ್ತಾ ಹೇಳುತ್ತಾರೆ ಜೆಸ್ನಾ ಸಲೀಂ.