ಮನಿಲಾ: ಪ್ರತಿಕೂಲ ಹವಾಮಾನದ ಕಾರಣದಿಂದ ಮನಿಲಾ ಕೊಲ್ಲಿಯಲ್ಲಿ ಗುರುವಾರ ಮುಳುಗಿದ್ದ ತೈಲ ಟ್ಯಾಂಕರ್‌ನಲ್ಲಿ ಸೋರಿಕೆ ಉಂಟಾಗಿದೆ ಎಂದು ಫಿಲಿಪೀನ್ಸ್ ಕರಾವಳಿ ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ.
ಮನಿಲಾ: ಪ್ರತಿಕೂಲ ಹವಾಮಾನದ ಕಾರಣದಿಂದ ಮನಿಲಾ ಕೊಲ್ಲಿಯಲ್ಲಿ ಗುರುವಾರ ಮುಳುಗಿದ್ದ ತೈಲ ಟ್ಯಾಂಕರ್‌ನಲ್ಲಿ ಸೋರಿಕೆ ಉಂಟಾಗಿದೆ ಎಂದು ಫಿಲಿಪೀನ್ಸ್ ಕರಾವಳಿ ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ.
ಫಿಲಿಪೀನ್ಸ್ ಧ್ವಜ ಹೊತ್ತ ಬತಾನ್ ಪ್ರಾಂತ್ಯದ ಕರಾವಳಿ ಬಳಿ ಈ ಹಡಗು ಮುಳುಗಡೆಯಾಗಿದೆ.
ಮುಳುಗಿರುವ ಹಡಗಿನಿಂದ ವಿಷಪೂರಿತ ತೈಲವನ್ನು ಸುರಕ್ಷಿತವಾಗಿ ಹೊರತೆಗೆದು ಉಂಟಾಗಬಹುದಾದ ಅನಾಹುತವನ್ನು ತಡೆಯುವ ನಿಟ್ಟಿನಲ್ಲಿ ಸಂಬಂಧಪಟ್ಟ ಆಡಳಿತಗಳು ಯೋಜನೆ ರೂಪಿಸುತ್ತಿವೆ.
ಮುಳುಗುತಜ್ಞರು ಮುಳುಗಿರುವ ಹಡಗಿನ ಬಳಿ ಸಾಗಿದ್ದಾರೆ. ವೈಮಾನಿಕ ಸಮೀಕ್ಷೆ ನಡೆಸಲಾಗಿದೆ.
ತೈಲ ಸೋರಿಕೆ ಆಗುತ್ತಿರುವುದು ನಿಜ, ಅತ್ಯಲ್ಪ ಪ್ರಮಾಣದಲ್ಲಿ ತೈಲ ಸೋರಿಕೆ ಆಗುತ್ತಿದೆ. ಹೀಗಾಗಿ ಪರಿಸ್ಥಿತಿ ಹತೋಟಿಯಲ್ಲಿದೆ ಎಂದು ಕರಾವಳಿ ಭದ್ರತಾ ಪಡೆಯ ವಕ್ತಾರರು ತಿಳಿಸಿದ್ದಾರೆ.