ಕೊಚ್ಚಿ: ಕಾಡಿನ ಸಮೀಪವಿದ್ದ ಗ್ರಾಮವೊಂದರಲ್ಲಿ ಬಾವಿಗೆ ಬಿದ್ದ ತನ್ನ ಕಂದಮ್ಮನ್ನು, ತಾಯಿ ಆನೆಯೊಂದು ರಕ್ಷಿಸಿದ ಘಟನೆ ಕೇರಳದ ಎರ್ನಾಕುಳಂ ಜಿಲ್ಲೆಯಲ್ಲಿ ನಡೆದಿದೆ.
ಮಲಯತ್ತೂರ್‌ನ ಇಲ್ಲಿತ್ತೋಡ್ ಪ್ರದೇಶದಲ್ಲಿರುವ ಖಾಸಗಿ ವ್ಯಕ್ತಿಗೆ ಸೇರಿದ ಜಮೀನಿನಲ್ಲಿ ಈ ಘಟನೆ ನಡೆದಿದೆ.
ಬಾವಿಗೆ ಬಿದ್ದ ಮರಿ ಆನೆಯನ್ನು ತಾಯಿ ಆನೆ ರಕ್ಷಿಸಿ, ಪಕ್ಕದಲ್ಲೇ ಇದ್ದ ಆನೆಗಳ ಹಿಂಡಿನೊಂದಿಗೆ ಒಟ್ಟುಗೂಡಿಸುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಬುಧವಾರ ಬೆಳಿಗ್ಗೆ ಆನೆಮರಿ ಬಾವಿಗೆ ಬಿದ್ದಿದ್ದು, ಇದರ ಸಮೀಪವೇ ಆನೆ ಹಿಂಡು ಇತ್ತು ಎಂದು ಪೊಲಿಸರು ತಿಳಿಸಿದ್ದಾರೆ.
ಘಟನೆ ನಡೆದ ಸ್ಥಳದಲ್ಲಿ ಸ್ಥಳೀಯರು, ಪೊಲೀಸರು ಹಾಗೂ ಅರಣ್ಯಾಧಿಕಾರಿಗಳು ಸೇರಿದ್ದರು. ಬಾವಿಗೆ ಬಿದ್ದ ಮರಿ ಆನೆಯನ್ನು, ತಾಯಿ ಆನೆಯು ರಕ್ಷಿಸಿದೆ. ಯಶಸ್ವಿ ರಕ್ಷಣೆ ಬಳಿಕ ಕಾಡಾನೆಗಳ ಹಿಂಡು ಕಾಡಿಗೆ ಮರಳಿದೆ ಎಂದು ಪೊಲೀಸರು ಹೇಳಿದ್ದಾರೆ.