ತಿರುವನಂತಪುರಂ: ಕೇರಳದ ಕೊಟ್ಟಾಯಂ ಜಿಲ್ಲೆಯ ಮಡಕತ್ತಾರ ಪಂಚಾಯತ್‌ನ ಖಾಸಗಿ ಫಾರ್ಮ್‌ನಲ್ಲಿ ಆಫ್ರಿಕನ್ ಹಂದಿ ಜ್ವರ ಪ್ರಕರಣ ಬೆಳಕಿಗೆ ಬಂದಿದೆ. ಹಂದಿ ಜ್ವರದ ಪ್ರಕರಣಗಳು ದೃಢಪಟ್ಟ ನಂತರ ಜಿಲ್ಲಾಧಿಕಾರಿ ಖಾಸಗಿ ಜಮೀನಿನಲ್ಲಿದ್ದ 310 ಹಂದಿಗಳನ್ನು ಕೊಲ್ಲಲು ಆದೇಶಿಸಿದ್ದಾರೆ.
ತಿರುವನಂತಪುರಂ: ಕೇರಳದ ಕೊಟ್ಟಾಯಂ ಜಿಲ್ಲೆಯ ಮಡಕತ್ತಾರ ಪಂಚಾಯತ್‌ನ ಖಾಸಗಿ ಫಾರ್ಮ್‌ನಲ್ಲಿ ಆಫ್ರಿಕನ್ ಹಂದಿ ಜ್ವರ ಪ್ರಕರಣ ಬೆಳಕಿಗೆ ಬಂದಿದೆ. ಹಂದಿ ಜ್ವರದ ಪ್ರಕರಣಗಳು ದೃಢಪಟ್ಟ ನಂತರ ಜಿಲ್ಲಾಧಿಕಾರಿ ಖಾಸಗಿ ಜಮೀನಿನಲ್ಲಿದ್ದ 310 ಹಂದಿಗಳನ್ನು ಕೊಲ್ಲಲು ಆದೇಶಿಸಿದ್ದಾರೆ.
ಜಿಲ್ಲೆಯಲ್ಲಿ ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕೊಟ್ಟಾಯಂ ಜಿಲ್ಲಾಧಿಕಾರಿ ಡಾ.ಪಿ.ಕೆ.ಜಯಶ್ರೀ ತಿಳಿಸಿದ್ದಾರೆ. ರೋಗ ದೃಢಪಟ್ಟಿರುವ ಜಮೀನಿನಲ್ಲಿ ಹಂದಿಗಳನ್ನು ಕೊಂದು ಹೂಳುವಂತೆ ಅವರು ಪಶುಸಂಗೋಪನಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ವೈದ್ಯರು, ಪಶುವೈದ್ಯಕೀಯ ನಿರೀಕ್ಷಕರು ಮತ್ತು ಸಹಾಯಕರನ್ನು ಒಳಗೊಂಡ ತಂಡವು ಈ ಕ್ರಮಗಳನ್ನು ಕೈಗೊಳ್ಳುತ್ತದೆ ಹಾಗೂ ಪ್ರಾಥಮಿಕ ಸೋಂಕು ಹರಡದಂತೆ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಲಾಗಿದೆ.
ಅಲ್ಲದೆ, ಹಂದಿ ಜ್ವರ ಕಂಡುಬಂದ ಜಮೀನಿನಿಂದ 1 ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ಸೋಂಕಿತ ಪ್ರದೇಶವೆಂದು ಮತ್ತು 10 ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ರೋಗ ಕಣ್ಗಾವಲು ಪ್ರದೇಶವೆಂದು ಘೋಷಿಸಲಾಗಿದೆ. ಪೀಡಿತ ಪ್ರದೇಶಗಳಿಂದ ಹಂದಿಮಾಂಸ ಸಾಗಣೆ ಅಥವಾ ಮೇವು ಸಾಗಣೆಯನ್ನು ಮುಂದಿನ ಆದೇಶದವರೆಗೆ ನಿಷೇಧಿಸಲಾಗಿದೆ. ಕಳೆದ 2 ತಿಂಗಳ ಹಿಂದೆ ಹಾನಿಗೊಳಗಾದ ಜಮೀನಿನಿಂದ ಬೇರೆ ಜಮೀನುಗಳಿಗೆ ಹಂದಿಗಳನ್ನು ಸಾಗಿಸಲಾಗಿದೆಯೇ ಎಂಬ ಬಗ್ಗೆಯೂ ಪಶುಸಂಗೋಪನಾ ಇಲಾಖೆ ತನಿಖೆ ನಡೆಸಲಿದೆ ಎಂದು ತಿಳಿಸಲಾಗಿದೆ.
ಆಫ್ರಿಕನ್ ಹಂದಿ ಜ್ವರವು ಒಂದು ಹಂದಿಯಿಂದ ಇನ್ನೊಂದಕ್ಕೆ ನೇರ ಸಂಪರ್ಕದ ಮೂಲಕ ಹರಡುತ್ತದೆ. ಸೋಂಕಿತ ಹಂದಿ ತಿಂದು ಬಿಟ್ಟಿರುವ ಏನನ್ನಾದರೂ ಆರೋಗ್ಯವಂತ ಹಂದಿ ತಿಂದರೆ ರೋಗ ಬಹುಬೇಗನೆ ಹರಡುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕ ಜ್ವರ, ಕಡಿಮೆ ಹಸಿವು, ಚರ್ಮದ ಗಾಯಗಳು, ಅತಿಸಾರ ಮತ್ತು ವಾಂತಿ, ಕೆಮ್ಮು ಮತ್ತು ಉಸಿರಾಟದ ತೊಂದರೆ ಆಫ್ರಿಕನ್ ಹಂದಿ ಜ್ವರದ ಲಕ್ಷಣಗಳಾಗಿವೆ. ಡೇಂಘಿ, ಚಿಕನ್ ಗುನ್ಯಾ, ಹಕ್ಕಿ ಜ್ವರ ಜನರನ್ನು ಹೆಚ್ಚು ಕಾಡಿತ್ತು. ಹಂದಿಜ್ವರ ಹಂದಿಯಿಂದ ಜನರಿಗೆ ಹರಡುವುದಿಲ್ಲ. ಹಂದಿಗಳಿಂದ ಹಂದಿಗೆ ಬಹುಬೇಗನೆ ಹರಡುತ್ತದೆ. ಈಗ ಪಕ್ಕದ ಕೇರಳದಲ್ಲಿ ಹಂದಿಜ್ವರ ಕಾಣಿಸಿಕೊಂಡಿರುವುದು ಕರ್ನಾಟಕದಲ್ಲೂ ಆತಂಕ ಸೃಷ್ಟಿಸಿದೆ.