ಬದಿಯಡ್ಕ: ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಚತುರ್ಥ ಚಾತುರ್ಮಾಸ್ಯ ವ್ರತಾಚರಣೆಯು ಭಾನುವಾರ ಆಶಾಢ ಶುದ್ಧ ಹುಣ್ಣಿಮೆಯಂದು ಪ್ರಾರಂಭವಾಯಿತು. ಬೆಳಗ್ಗೆ ಮಹಾಗಣಪತಿ ಹೋಮ, ವ್ರತಾಚರಣೆಯ ಭಾಗವಾಗಿ ವಿವಿಧ ವೈದಿಕ ಕಾರ್ಯಕ್ರಮಗಳು ಜರಗಿತು. ವ್ಯಾಸಪೂಜೆಯನ್ನು ನೆರವೇರಿಸುವುದರೊಂದಿಗೆ ಶ್ರೀಗಳ 60 ದಿನಗಳ ವ್ರತಾಚರಣೆ ಆರಂಭವಾಯಿತು. ವೈದಿಕ ವಿದ್ವಾಂಸರಿಂದ ಮಂತ್ರಘೋಷ ಮೊಳಗಿತು. ಸೆಪ್ಟಂಬರ್ 18 ಭಾದ್ರಪದ ಶುದ್ಧ ಹುಣ್ಣಿಮೆಯಂದು ತನಕ ವ್ರತಾಚರಣೆ ಸಂಪನ್ನಗೊಳ್ಳಲಿದೆ. ಎಲ್ಲಾ ದಿನಗಳಲ್ಲಿಯೂ ವೈದಿಕ, ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ.