HEALTH TIPS

ಕೇರಳದಲ್ಲಿ ಪ್ರವಾಹ ಭೀತಿ: ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಹಲವು ನದಿಗಳು

         ತಿರುವನಂತಪುರಂ: ಕೇರಳದಾದ್ಯಂತ ಇರುವ ನದಿಗಳ ನೀರಿನ ಮಟ್ಟ ಅಪಾಯಕಾರಿಯಾಗಿ ಏರಿಕೆಯಾಗುವ ಸಂಭವ ಇರುವುದರಿಂದ, ಕೇಂದ್ರ ಜಲ ಆಯೋಗವು ರಾಜ್ಯದ ವಿವಿಧ ನದಿಗಳಿಗೆ ‌ಯೆಲ್ಲೋ ಮತ್ತು ಆರೆಂಜ್ ಅಲರ್ಟ್ ಅನ್ನು ಘೋಷಿಸಿದೆ.

         ಎರ್ನಾಕುಲಂನ ಕಲಿಯಾರ್, ತ್ರಿಶೂರ್ ನ ಕೀಚೇರಿ, ಪಾಲಕ್ಕಾಡ್ ನ ಪುಲಂತೋಡ್ ಹಾಗೂ ಕೋಯಿಕ್ಕೋಡ್ ನ ಕುಟ್ಟಿಯಾಡಿ ನದಿಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

            ತಿರುವನಂತಪುರಂನ ಕರಮನ, ಪಟ್ಟಣಂತಿಟ್ಟದ ಪಂಪ, ಇಡುಕ್ಕಿಯ ತೋಡುಪುಳ, ತ್ರಿಶೂರ್ ನ ಗಾಯತ್ರಿ ಹಾಗೂ ಚಲಕುಡಿ, ಮಲಪ್ಪುರಂನ ಚಲಿಯಾರ್ ಹಾಗೂ ಮಲಪ್ಪುರಂನ ಕುತ್ತಿರಪ್ಪುಳ ನದಿಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

               ಈ ನದಿಗಳ ಪಾತ್ರದಲ್ಲಿ ವಾಸಿಸುತ್ತಿರುವ ಗ್ರಾಮಸ್ಥರಿಗೆ ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡಲಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries