ಮಧೂರು: ಶಿವರಾಮ ಕಾರಂತರ ಚೋಮನ ದುಡಿ,ಎಸ್.ಎಲ್. ಭೈರಪ್ಪನವರ ಯಾನ ಸೇರಿದಂತೆ ಕನ್ನಡದ ಹಲವು ಮಹತ್ವಪೂರ್ಣ ಕೃತಿಗಳನ್ನು ಮಲಯಾಳ ಭಾಷೆಗೆ ಅನುವಾದಿಸಿ ಕನ್ನಡದ ಕೀರ್ತಿಯನ್ನು ಮಲಯಾಳಂ ಸಾಹಿತ್ಯಲೋಕಕ್ಕೆ ಪಸರಿಸಿದ ನಿವೃತ್ತ ಉಪಜಿಲ್ಲಾ ವಿದ್ಯಾಧಿಕಾರಿ,ಶಿಕ್ಷಕ ಕುಮಾರನ್ ಮಾಸ್ತರರನ್ನು ವಿದ್ಯಾನಗರದ ಅವರ ನಿವಾಸದಲ್ಲಿ ವಾಮನರಾವ್ ಬೇಕಲ ಸಾರಥ್ಯದ ಕಾಸರಗೋಡಿನ ಕನ್ನಡ ಭವನ ಗ್ರಂಥಾಲಯದ ವತಿಯಿಂದ ಅಭಿನಂದಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಮುಖ್ಯ ಅತಿಥಿಯಾಗಿದ್ದರು. ಪತ್ರಕರ್ತ, ಸಾಹಿತಿ ರಾಧಾಕೃಷ್ಣ .ಕೆ ಉಳಿಯತ್ತಡ್ಕ ಅಭಿನಂದನಾ ಭಾಷಣ ಮಾಡಿದರು.ಇವರು ಸಾಹಿತ್ಯರಂಗಕ್ಕೆ ಸಲ್ಲಿಸಿದ ಸಮಗ್ರ ಸೇವೆಗಾಗಿ ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ
ವಿಶಾಲಾಕ್ಷ ಪುತ್ರಕಳ ಸ್ವಾಗತಿಸಿ, ಪತ್ರಕರ್ತ ಪ್ರದೀಪ್ ಬೇಕಲ್ ವಂದಿಸಿದರು. ಸಂಧ್ಯಾರಾಣಿ ಕಾರ್ಯಕ್ರಮ ನಿರೂಪಿಸಿದರು.