HEALTH TIPS

ವಿದ್ಯುತ್ ಶಾಕ್ ತಗುಲಿ ಮಹಿಳೆ ಮೃತ್ಯು

                ಕಾಸರಗೋಡು: ಮನೆಯಲ್ಲಿ ಅಡುಗೆ ಕೊಠಡಿಯೊಳಗೆ ಲೈಟ್ ಸ್ವಿಚ್ ಹಾಕುವ ವೇಳೆ ವಿದ್ಯುತ್ ಶಾಕ್ ತಗುಲಿ ಗೃಹಿಣಿ ಮೃತಪಟ್ಟಿದ್ದಾರೆ. ಮಾಯಿಪ್ಪಾಡಿ ಸನಿಹದ ಕುದ್ರೆಪ್ಪಾಡಿ ನಿವಾಸಿ ಗೋಪಾಲ ಗಟ್ಟಿ ಎಂಬವರ ಪತ್ನಿ ಹೇಮಾವತಿ (53) ಮೃತಪಟ್ಟವರು. 

               ಸೋಮವಾರ ರಾತ್ರಿ ಘಟನೆ ನಡೆದಿದೆ.  ಮನೆಯಿಂದ ಅಡುಗೆ ಕೋಣೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದ್ದು, ಇಲ್ಲಿನ ಸ್ವಿಚ್ ಆನ್ ಮಾಡುವ ವೇಳೆ ವಿದ್ಯುತ್ ಶಾಕ್ ತಗುಲಿದೆ. ವಿದ್ಯುತ್ ವಯರಿನೊಳಗೆ ನೀರು ನುಗ್ಗಿ ಶಾಕ್ ತಗುಲಿರಬೇಕೆಂದು ಸಂಶಯಿಸಲಾಗಿದೆ. ವಿದ್ಯುತ್ ಆಘಾತಕ್ಕೊಳಗಾದ ಹೇಮಾವತಿ ಅವರನ್ನು ತಕ್ಷಣ  ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಿರಲಿಲ್ಲ.   ವಿದ್ಯಾನಗರ ಠಾಣೆ ಪೆÇಲೀಸರು ಕೇಸು ದಆಖಲಿಸಿಕೊಂಡಿದ್ದಾರೆ.  



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries