ತಿರುವನಂತಪುರಂ; ಹೋಟೆಲ್‍ನ ಗಾಜಿನ ಕಪಾಟಿನಲ್ಲಿ ಇರಿಸಿದ್ದ ಸಿಹಿತಿಂಡಿಗಳನ್ನು ಬೆಕ್ಕು ತಿನ್ನುತ್ತಿರುವ ವಿಡಿಯೋ ವೈರಲ್ ಆಗಿದ್ದು, ಹೋಟೆಲ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ವೆಂಜಾರಮೂಡ್ ನೆಲ್ಲನಾಡು ಪಂಚಾಯತ್ ವ್ಯಾಪ್ತಿಯ ವಾಯೆಟ್ ಬಳಿಯ ಹೋಟೆಲಿಗೆ ಆಗಮಿಸಿದ ಅಧಿಕಾರಿಗಳು ಅಂಗಡಿಯನ್ನು ಮುಚ್ಚಿಸಿದರು.
ಎರಡು ದಿನಗಳ ಹಿಂದೆ ದಾರಿಹೋಕರೊಬ್ಬರು ವಿಡಿಯೋ ರೆಕಾರ್ಡ್ ಮಾಡಿ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು. ಘಟನೆ ಹರಡುತ್ತಿದ್ದಂತೆ ಪಂಚಾಯಿತಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ದೂರು ಕೂಡ ಬಂದಿದೆ. ನಂತರ ನೆಲನಾಡು ಪಂಚಾಯಿತಿ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಚಹಾ ಅಂಗಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆವರಣವನ್ನು ಸ್ವಚ್ಛಗೊಳಿಸದಿರುವುದು ಮತ್ತು ಅಗತ್ಯ ಪರವಾನಗಿ ಇಲ್ಲದಿರುವುದು ಕಂಡುಬಂದ ನಂತರ, ಅಂಗಡಿಯನ್ನು ಮುಚ್ಚಲು ಆದೇಶಿಸಲಾಯಿತು. ಅಂಗಡಿಯ ಅನೈರ್ಮಲ್ಯ ಮುಕ್ತಗೊಳಿಸಿ ನವೀಕರಣಗೊಂಡ ನಂತರ ಅರ್ಜಿ ಸಲ್ಲಿಸಿದರೆ, ಪರಿಶೀಲನೆ ನಡೆಸಿದ ನಂತರವೇ ಪರವಾನಗಿ ನೀಡಲಾಗುವುದು ಎಂದು ಪಂಚಾಯಿತಿ ಅಧ್ಯಕ್ಷೆ ಬೀನಾ ರಾಜೇಂದ್ರನ್ ತಿಳಿಸಿದರು.