ಗ್ವಾಲಿಯರ್: ಮಧ್ಯ ಪ್ರದೇಶದ ಗ್ವಾಲಿಯರ್ ನಗರದ 24 ವರ್ಷದ ವ್ಯಕ್ತಿಯೊಬ್ಬ ತಾನು ಕಪ್ಪಾಗಿದ್ದೇನೆಂದು ಪತ್ನಿ ನನ್ನನ್ನು ತೊರೆದಿದ್ದಾಳೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ತನ್ನ ವಿರುದ್ಧ ಕಿರುಕುಳದ ಸುಳ್ಳು ದೂರನ್ನು ದಾಖಲಿಸಿದ್ದಾಳೆ ಎಂದು ಆರೋಪಿಸಿದ್ದಾರೆ.

ಈ ಸಂಬಂಧ ಆ ವ್ಯಕ್ತಿ ಪತ್ನಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಕುರಿತು ಯಾವುದೇ ಕ್ರಮ ಕೈಗೊಳ್ಳುವ ಮುನ್ನ ಶನಿವಾರ ಇಬ್ಬರನ್ನೂ ಪೊಲೀಸರು ಕೌನ್ಸೆಲಿಂಗ್‌ಗೆ ಕರೆಸಿದ್ದರು. ಆದರೆ, ಯಾವುದೇ ಪ್ರಯೋಜನವಾಗಿಲ್ಲ.
14 ತಿಂಗಳ ಹಿಂದೆ ದಂಪತಿ ವಿವಾಹವಾಗಿದ್ದರು. ಆದರೆ, ಪತ್ನಿ ನಿತ್ಯ ತನ್ನ ಬಣ್ಣವನ್ನು ಉಲ್ಲೇಖಿಸಿ ಹೀಗಳೆಯುತ್ತಿದ್ದಳು. 10 ದಿನಗಳ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿದ ಪತ್ನಿ, ಮಗುವನ್ನು ಬಿಟ್ಟು ತನ್ನ ತವರು ಮನೆಗೆ ತೆರಳಿದ್ದಾಳೆ ಎಂದು ಪತಿ ಆರೋಪಿಸಿದ್ದಾರೆ.
'ಕರೆತರಲು ಅವಳ ತವರು ಮನೆಗೆ ಹೋದಾಗ ಮತ್ತೆ ನನ್ನ ಬಣ್ಣದ ಬಗ್ಗೆ ಕಾಮೆಂಟ್ ಮಾಡಿ ಹೀಯಾಳಿಸಿದಳು. ಮನೆಗೆ ಬರಲು ನಿರಾಕರಿಸಿದಳು. ಬಳಿಕ, ಮಹಿಳಾ ಪೊಲೀಸ್ ಠಾಣೆಯಲ್ಲಿ ಕಿರುಕುಳದ ದೂರು ದಾಖಲಿಸಿದ್ದಾಳೆ'ಎಂದು ಪತಿ ಆರೋಪಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಎಸ್‌ಪಿ ಕಿರಣ್ ಅಹಿರ್ವಾರ್, ಸಂಬಂಧಿಕರ ಮನೆಯಲ್ಲಿ ಮಗುವನ್ನು ಬಿಟ್ಟು ಆಕೆ ತೆರಳಿದ್ದಾರೆ ಎಂದು ಹೇಳಿದ್ದಾರೆ.
ಈ ಸಂಬಂಧ ಪತಿ ಮತ್ತು ಆತನ ತಾಯಿ ಸಹ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.