ಮುಂಬೈ: ಟಿ20 ವಿಶ್ವಕಪ್ ಗೆದ್ದ ಭಾರತ ಕ್ರಿಕೆಟ್ ತಂಡಕ್ಕೆ ಏಕನಾಥ ಶಿಂದೆ ನೇತೃತ್ವದ ಸರ್ಕಾರವು ₹11 ಕೋಟಿ ಬಹುಮಾನ ಘೋಷಿಸಿರುವುದು ವಿರೋಧ ಪಕ್ಷ ಕಾಂಗ್ರೆಸ್, ಶಿವಸೇನೆ ಮತ್ತು ಆಡಳಿತರೂಢ ಬಿಜೆಪಿ ನಡುವೆ ವಾಗ್ವದಕ್ಕೆ ಕಾರಣವಾಯಿತು.
ಮುಂಬೈ: ಟಿ20 ವಿಶ್ವಕಪ್ ಗೆದ್ದ ಭಾರತ ಕ್ರಿಕೆಟ್ ತಂಡಕ್ಕೆ ಏಕನಾಥ ಶಿಂದೆ ನೇತೃತ್ವದ ಸರ್ಕಾರವು ₹11 ಕೋಟಿ ಬಹುಮಾನ ಘೋಷಿಸಿರುವುದು ವಿರೋಧ ಪಕ್ಷ ಕಾಂಗ್ರೆಸ್, ಶಿವಸೇನೆ ಮತ್ತು ಆಡಳಿತರೂಢ ಬಿಜೆಪಿ ನಡುವೆ ವಾಗ್ವದಕ್ಕೆ ಕಾರಣವಾಯಿತು.
'ಭಾರತ ಕ್ರಿಕೆಟ್ ತಂಡದ ಸಾಧನೆ ಬಗ್ಗೆ ನಮಗೆ ಹೆಮ್ಮೆಯಿದೆ. ಆದರೆ ಸರ್ಕಾರದ ಬೊಕ್ಕಸದಿಂದ 11 ಕೋಟಿ ನೀಡುವ ಅಗತ್ಯವಿರಲಿಲ್ಲ. ಮುಖ್ಯಮಂತ್ರಿಗಳು ತಮ್ಮ ಜೇಬಿನಿಂದ ಹಣ ನೀಡಲಿ' ಎಂದು ವಿರೋಧಪಕ್ಷಗಳು ಆಗ್ರಹಿಸಿದವು.
ಭಾರತದ ತಂಡದ ಆಟಗಾರರಾದ ಮುಂಬೈ ಮೂಲದ ರೋಹಿತ್ ಶರ್ಮ, ಸೂರ್ಯಕುಮಾರ್, ಯಶಸ್ವಿ ಜೈಸ್ವಾಲ್ ಮತ್ತು ಶಿವಂ ದುಬೆಯವರನ್ನು ವಿಧಾನ ಭವನದಲ್ಲಿ ಅಭಿನಂದಿಸಿದ ಶಿಂದೆ ಅವರು ತಂಡಕ್ಕೆ ಸರ್ಕಾರದಿಂದ ₹11 ಕೋಟಿ ನೀಡುವುದಾಗಿ ಘೋಷಿಸಿದ್ದರು.
'ರಾಜ್ಯದ ಬೊಕ್ಕಸ ಬರಿದಾದರೆ ಬಡಜನರು ಸಾಯುತ್ತಾರೆ. ಆದರೆ ರಾಜ್ಯಸರ್ಕಾರಕ್ಕೆ ಇದರ ಚಿಂತೆಯಿಲ್ಲ. ತನ್ನ ಬೆನ್ನುತಟ್ಟಿಕೊಳ್ಳುವುದೇ ಮುಖ್ಯವಾಗಿದೆ' ಎಂದು ವಿಧಾನಸಭೆಯ ವಿರೋಧಪಕ್ಷದ ನಾಯಕ ವಿಜಯ್ ವಡೆಟ್ಟಿವರ್ ಅವರು ಟೀಕಿಸಿದರು.
'ಗೆದ್ದವರಿಗೆ ಸೂಕ್ತವಾದ ಬಹುಮಾನ ಸಿಕ್ಕಿದೆ. ಒಂದು ವೇಳೆ ಕೊಡುವುದಾದರೆ ಮುಖ್ಯಮಂತ್ರಿಗಳು ತಮ್ಮ ವೈಯುಕ್ತಿಕ ಹಣವನ್ನು ನೀಡಲಿ' ಎಂದು ವಿಧಾನಪರಿಷತ್‌ನ ವಿಪಕ್ಷ ನಾಯಕ ಅಂಬಾದಾಸ್ ದಾನ್ವೆ ಆಗ್ರಹಿಸಿದರು.
ವಿಪಕ್ಷಗಳ ಟೀಕೆಗ ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ ಪ್ರವೀಣ್ ಧಾರೇಕರ್ ಅವರು. 'ವಿಜಯ್ ಅವರು ತುಚ್ಛ ಮನಸ್ಥಿತಿಯನ್ನು ಹೊಂದಿದ್ದಾರೆ. ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಗಾಧ ಸಂಖ್ಯೆಯಲ್ಲಿ ಭಾಗಿಯಾಗುವ ಮೂಲಕ ಜನರು ತಮ್ಮ ಪ್ರೀತಿ ಮತ್ತು ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಆದರೆ ವಿಜಯ್ ಈ ಕಾರ್ಯಕ್ರಮದಲ್ಲೂ ರಾಜಕೀಯ ಹುಡುಕುತ್ತಿದ್ದಾರೆ' ಎಂದು ತಿರುಗೇಟು ನೀಡಿದರು.