ಮಂಜೇಶ್ವರ: ಮೀಯಪದವು ವಿದ್ಯಾವರ್ಧಕ ಎ.ಯು.ಪಿ ಶಾಲೆಯಲ್ಲಿ ವಿವಿಧ ಕ್ಲಬ್ ಗಳ ಉದ್ಘಾಟನೆ ಕಾರ್ಯಕ್ರಮ ದಿ.ರಾಮಕೃಷ್ಣರಾವ್ ಸಭಾಂಗಣದಲ್ಲಿ ಶನಿವಾರ ಜರಗಿತು. ಕಾರ್ಯಕ್ರಮವನ್ನು ಶಾಲಾ ಮುಖ್ಯೋಪಾಧ್ಯಾಯ ಅರವಿಂದಾಕ್ಷ ಭಂಡಾರಿ ಔಪಚಾರಿಕವಾಗಿ ಉದ್ಘಾಟಿಸಿದರು. ವಿಜ್ಞಾನ ಕ್ಲಬ್ ಸಂಚಾಲಕ ಹರೀಶ್ ಸುಲಾಯ, ಹಿಂದಿ ಕ್ಲಬ್ ನ ಸಂಚಾಲಕ ರಾಮಚಂದ್ರ. ಕೆ.ಎಂ, ಇಂಗ್ಲಿಷ್ ಕ್ಲಬ್ ಸಂಚಾಲಕ ಕೃಷ್ಣ ಶರ್ಮ.ಕೆ, ಉರ್ದು ಕ್ಲಬ್ ಸಂಚಾಲಕ ಬಾಲಕೃಷ್ಣ.ಎಂ, ಸಮಾಜ ವಿಜ್ಞಾನ ಕ್ಲಬ್ ಸಂಚಾಲಕ ಮಹಾಬಲೇಶ್ವರ ಭಟ್, ವಿದ್ಯಾರಂಗ ಕ್ಲಬ್ ಸಂಚಾಲಕ ಸುನಿಲ್ ಕುಮಾರ್. ಎಂ,ಗಣಿತ ಕ್ಲಬ್ ಸಂಚಾಲಕಿ ಯೋಗಿತ ಹಾಗೂ ಸಂಸ್ಕೃತ ಕ್ಲಬ್ ಸಂಚಾಲಕಿ ಶ್ರೀಲಕ್ಷ್ಮಿ.ಬಿ ಶುಭಹಾರೈಸಿದರು. ಬಳಿಕ ವಿವಿಧ ಕ್ಲಬ್ ಗಳ ವಿದ್ಯಾರ್ಥಿಗಳಿಂದ ಚಟುವಟಿಕೆಗಳು ನಡೆದವು.ಕಾರ್ಯಕ್ರಮವನ್ನು ಶಾಲಾ ಅಧ್ಯಾಪಕರಾದ ವಿಘ್ನೇಶ್.ಎಸ್ ನಿರ್ವಹಿಸಿದರು.