ಕುಂಬಳೆ: ಧರ್ಮತ್ತಡ್ಕದ ಯುವಕ ಸಂಘ ಗ್ರಂಥಾಲಯ ಮತ್ತು ವಾಚನಾಲಯದ ಆಶ್ರಯದಲ್ಲಿ ವಾಚನ ಪಕ್ಷಾಚರಣೆ ಅಂಗವಾಗಿ ವಿ.ಸಾಂಬಶಿವನ್ ಸಂಸ್ಮರಣೆ ಮತ್ತು ಪುಸ್ತಕ ವಿಮರ್ಶೆ ಕಾರ್ಯಕ್ರಮವು ಸಂಘದ ಅಧ್ಯಕ್ಷ ರವಿಲೋಚನ ಸಿ.ಎಚ್. ಅವರ ಅಧ್ಯಕ್ಷತೆಯಲ್ಲಿ ಜರಗಿತು.
ಕಾರ್ಯಕ್ರಮವನ್ನು ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್‍ನ ಕಾರ್ಯಕಾರಿ ಸಮಿತಿ ಸದಸ್ಯ ದಾಸಪ್ಪ ಮಾಸ್ತರ್ ಉದ್ಘಾಟಿಸಿದರು. ಧರ್ಮತ್ತಡ್ಕ ಶಾಲಾ ಪ್ರಾಂಶುಪಾಲ ಎನ್.ರಾಮಚಂದ್ರ ಭಟ್ ಅವರು ವಿ.ಸಾಂಬಶಿವನ್ ಅವರ ಸಂಸ್ಮರಣೆ ಮಾಡಿದರು. ಪ್ರೊ.ಪಿ.ನ್.ಮೂಡಿತ್ತಾಯ ನಾ.ಮೊಗಸಾಲೆ ಅವರ ನೀರು,ಧÀರ್ಮ ಯುದ್ದ ಪುಸ್ತಕವನ್ನು ವಿಮರ್ಶೆ ಮಾಡಿದರು. ಧರ್ಮತ್ತಡ್ಕ ಶಾಲಾ ಪ್ರಬಂಧಕ ಶಂಕರ ನಾರಾಯಣ ಭಟ್ ಶುಭಹಾರೈಸಿದರು. ಸಂಘದ ಉಪಾಧ್ಯಕ್ಷ ರಾಮಮೋಹನ ಸಿ.ಎಚ್. ಸ್ವಾಗತಿಸಿ, ಸಂಘದ ಸದಸ್ಯ ನಿವೇದಿತಾ ಟೀಚರ್ ವಂದಿಸಿದರು. ಸಂಘದ ಸದಸ್ಯರಾದ ಸತೀಶ್ ಮಾಸ್ತರ್ ನಿರೂಪಿಸಿದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು.