ಉಪ್ಪಳ: ದೇಶೀಯ ಅಧ್ಯಾಪಕ ಪರಿಷತ್ (ಎನ್ ಟಿ ಯು) ಮಂಜೇಶ್ವರ ಉಪಜಿಲ್ಲಾ ಸಮಿತಿ ವತಿಯಿಂದ ಮಂಜೇಶ್ವರ ಸಹಾಯಕ ಶಿಕ್ಷಣಾಧಿಕಾರಿಗಳ ಕಚೇರಿಯ ಮುಂದೆ ಶಿಕ್ಷಣ ಕಾಯಿದೆಯನ್ನು ವಿರೋಧಿಸಿ ಪ್ರಕಟಿಸಿದ ಶೈಕ್ಷಣಿಕ ಕ್ಯಾಲೆಂಡರ್ ನ್ನು ವಿರೋಧಿಸಿ ಪ್ರತಿಭಟನಾ ಧರಣಿಯನ್ನು ಶನಿವಾರ ನಡೆಸಲಾಯಿತು.
ಎನ್ ಟಿ ಯು ರಾಜ್ಯ ಸಮಿತಿ ಸದಸ್ಯ ಅರವಿಂದಾಕ್ಷ ಭಂಡಾರಿ ಧರಣಿಯನ್ನು ಔಪಚಾರಿಕವಾಗಿ ಉದ್ಘಾಟಿಸಿ ಮಾತನಾಡಿದರು .ಎನ್ ಟಿ ಯು ರಾಜ್ಯ ಸಮಿತಿ ಸದಸ್ಯ ಸತೀಶ್ ಶೆಟ್ಟಿ ಒಡ್ಡಂಬೆಟ್ಟು ಧರಣಿಯ ಉದ್ದೇಶವನ್ನು ಹಾಗೂ ಅವಶ್ಯಕತೆಯನ್ನು ತಿಳಿಸಿದರು.ರಾಜ್ಯ ವನಿತಾ ವಿಂಗ್ ಸದಸ್ಯೆ ಸುಚಿತ ಟೀಚರ್, ಜಿಲ್ಲಾಸಮಿತಿ ಸದಸ್ಯ ಈಶ್ವರ ಕಿದೂರು, ಉಪಜಿಲ್ಲಾ ಅಧ್ಯಕ್ಷೆ ಚಂದ್ರಿಕಾ ಟೀಚರ್, ಕಾರ್ಯದರ್ಶಿ ದೇವಿಪ್ರಸಾದ್ ಇನ್ನಿತರು ಮಾತನಾಡಿದರು.ಮಂಜೇಶ್ವರ ಉಪಜಿಲ್ಲಾ ಸದಸ್ಯರು ಧರಣಿಯಲ್ಲಿ ಪಾಲ್ಗೊಂಡರು.