ಕಾಸರಗೋಡು: ರಾಜ್ಯದ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧೀನದಲ್ಲಿರುವ ಶಿಕ್ಷಣ ಕಚೇರಿಗಳಲ್ಲಿ 2023ರ ಡಿಸೆಂಬರ್ 31 ರವರೆಗೆವಿಲೇವಾರಿಗಾಗಿ ಬಾಕಿ ಉಳಿದಿರುವ ಕಡತಗಳನ್ನು ಇತ್ಯರ್ಥಪಡಿಸುವ ಅಂಗವಾಗಿ ರಾಜ್ಯ ಮಟ್ಟದಲ್ಲಿ ಮೂರು ಪ್ರದೇಶಗಳಲ್ಲಿ ಕಡತ ವಿಲೇವಾರಿ ಅದಾಲತ್ ನಡೆಸಲಾಗುತ್ತಿದೆ.
ಜಿಲ್ಲೆಯ ಶಿಕ್ಷಣ ಉಪನಿರ್ದೇಶಕರ ಅಧಿಕಾರ ವ್ಯಾಪ್ತಿಯಲ್ಲಿರುವ ಸಂಸ್ಥೆಗಳಲ್ಲಿ ಶಿಕ್ಷಕರ ನೇಮಕಾತಿ, ಪಿಂಚಣಿ, ವಿಜಿಲೆನ್ಸ್ ಪ್ರಕರಣಗಳು, ವಿಕಲಚೇತನರಿಗೆ ಮೀಸಲಾತಿ ಮತ್ತು ಇತರ ಸಾಮಾನ್ಯ ವಿಷಯಗಳ ಅನುಮೋದನೆಗೆ ಸಂಬಂಧಿಸಿದ ವಿಷಯಗಳಲ್ಲಿ ಇನ್ನೂ ಪ್ರಕ್ರಿಯೆ ಪೂರ್ತಿಗೊಳಿಸದ ಕಛೇರಿಗಳಲ್ಲಿ ಪ್ರಾರಂಭವಾದ ಕಡತಗಳ ಮೇಲಿನ ದೂರುಗಳು/ಅಪೀಲುಗಳನ್ನು ಶಿಕ್ಷಣದ ಉಪನಿರ್ದೇಶನಾಲಯ/ಜಿಲ್ಲಾ ಶಿಕ್ಷಣ ಕಛೇರಿ/ಉಪ ಜಿಲ್ಲಾ ಶಿಕ್ಷಣಾಧಿಕಾರಿ ಕಛೇರಿಗೆ ಸಲ್ಲಿಸಬಹುದು. ಜುಲೈ 25ರವರೆಗೆ ದೂರುಗಳನ್ನು ಸ್ವೀಕರಿಸಲಾಗುವುದು.