ಕೊಟ್ಟಾಯಂ: ಹಾವು ಕಡಿತದ ಚಿಕಿತ್ಸೆಗಾಗಿ ವಿಷ ಪ್ರತಿರೋಧ ಔಷಧಿ ನೀಡುವ ಆಸ್ಪತ್ರೆಗಳ ಹೆಸರನ್ನು ಪ್ರಕಟಿಸುವಂತೆ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಆರೋಗ್ಯ ಇಲಾಖೆ ನಿರ್ದೇಶಕರಿಗೆ ಸೂಚಿಸಿದ್ದಾರೆ.
ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಆಸ್ಪತ್ರೆಗಳ ಹೆಸರನ್ನು ಪ್ರಕಟಿಸಬೇಕು. ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಹಾವು ಕಚ್ಚಿದ ನಂತರ ಆ್ಯಂಟಿವೆನಮ್ ಚಿಕಿತ್ಸೆ ಆದಷ್ಟು ಬೇಗ ಲಭ್ಯವಾಗಬೇಕು. ಆದ್ದರಿಂದ ಹಾವು ಕಚ್ಚಿಸಿಕೊಂಡವರು ಹೆಚ್ಚು ದೂರ ಹೋಗದೆ ಆಂಟಿವೆನಮ್ ಪಡೆಯಬೇಕು. ತಾಲೂಕು ಆಸ್ಪತ್ರೆಗಳಿಂದ ಹಿಡಿದು ವೈದ್ಯಕೀಯ ಕಾಲೇಜುಗಳವರೆಗಿನ ಆಸ್ಪತ್ರೆಗಳಲ್ಲಿ ಆಂಟಿವೆನಮ್ ಲಭ್ಯವಾಗುವಂತೆ ಮಾಡಲಾಗಿದೆ. ಗರಿಷ್ಠ ಸಂಖ್ಯೆಯ ಆಸ್ಪತ್ರೆಗಳಲ್ಲಿ ಆಂಟಿವೆನಮ್ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆ ಪ್ರಯತ್ನಿಸುತ್ತಿದೆ. ಕೆಎಂಎಸ್‍ಸಿಎಲ್‍ಗೆ ಸಮರ್ಪಕ ಆ್ಯಂಟಿವೆನಮ್ ಖರೀದಿಸುವಂತೆ ಸೂಚಿಸಲಾಗಿದೆ.