HEALTH TIPS

ಕಲಾವಿದರಿಗೆ ನೀಡುವ ಗೌರವ ಕಲೆಯ ಮಹತ್ತರ ಬೆಳವಣಿಗೆಗೆ ಸಹಕಾರಿ-ಮಾಜಿ ಸಚಿವ ಪ್ರಮೋದ್ ಮಧ್ವರಾಜ್

                 ಕಾಸರಗೋಡು: ಕಲೆ ಹಾಗೂ ಕಲಾವಿದರಿಗೆ ನೀಡುವ ಗೌರವಾದರ ಕಲೆಯ ಮಹತ್ತರ ಬೆಳವಣಿಗೆಗೆ ಸಹಾಯವಾಗುವುದಾಗಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ. 

                 ಅವರು ಮಾನವಹಕ್ಕು ಆಯೋಗದ ಹಂಗಾಮಿ ಅಧ್ಯಕ್ಷ, ಶ್ರೀಎಡನೀರು ಮಠದ ಶಿಷ್ಯರಲ್ಲೊಬ್ಬರಾದ ಡಾ. ಟಿ. ಶ್ಯಾಂಭಟ್ ಐಎಎಸ್ ಅವರಿಗೆ ಚಾತುರ್ಮಾಸ್ಯ ಸಮಿತಿ ಮಾನ್ಯ ವಲಯ ಸಮಿತಿಯಿಂದ ಶ್ಯಾಂಭಟ್ಟರ ಅಭಿಮಾನಿ ಬಳಗ ಆಯೋಜಿಸಿದ ಸನ್ಮಾನ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

                 ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ನಾಲ್ಕನೇ ಚಾತುರ್ಮಾಸ್ಯ ಸಮಾರಂಭದ ಅಂಗವಾಗಿ ಎಡನೀರು ಮಠದ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

              ಯಕ್ಷಗಾನ ಕಲೆ ಹಾಗೂ ಕಲಾವಿದರನ್ನು ಪೋಷಿಸಿಕೊಂಡು ಬರುತ್ತಿರುವ ಟಿ. ಶ್ಯಾಂ ಭಟ್ ಅವರಿಗೆ ಕಲೆಯ ಮೇಲಿರುವ ಪ್ರೀತಿ ಅವರನ್ನು ಮೇರು ವಯಕ್ತಿತ್ವದೆಡೆಗೆ ಕೊಂಡೊಯ್ದಿದೆ. ಶ್ಯಾಂ ಭಟ್ ಅವರದ್ದು ಎಲ್ಲ ರಾಜಕೀಯ ಪಕ್ಷದವರಿಗೆ ಬೇಕಾದ ವ್ಯಕ್ತಿತ್ವವಾಗಿದೆ. ತಮ್ಮ ಸೇವಾವಧಿಯಲ್ಲಿ ತಳಮಟ್ಟದ ವ್ಯಕ್ತಿಗಳಿಗೂ ಸಹಾಯಹಸ್ತ ಚಾಚುವ ಮೂಲಕ ಪರೋಪಕಾರ ಮನೋಭಾವ ಬೆಳೆಸಿಕೊಂಡು ಬಂದಿದ್ದಾರೆ ಎಂದು ತಿಳಿಸಿದರು. 

                  ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರು ಟಿ. ಶ್ಯಾಂ ಭಟ್ ಅವರನ್ನು ಶಾಲುಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಿದರು. ನಂತರ ಆಶೀರ್ವಚನ ನೀಡಿ ಯಕ್ಷಗಾನ ಕಲೆ ಹಾಗೂ ಕಲಾವಿದರ ಮೇಲೆ ಟಿ. ಶ್ಯಾಂ ಭಟ್ ಅವರಿಗಿರುವ ಪ್ರೀತಿ ಅಪಾರವಾದುದು. ತಾವು ನಡೆದುಬಂದ ಹಾದಿಯನ್ನು ಎಂದಿಗೂ ಮರೆಯದೆ, ಸರಳತೆಯನ್ನು ಕಾಯ್ದುಕೊಂಡು ಬಂದ ಸ್ನೇಹಜೀವಿಯಾಗಿದ್ದಾರೆ ಎಂದು ಬಣ್ಣಿಸಿದರು.

           ಕಟೀಲು ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರರಲ್ಲಿ ಒಬ್ಬರಾದ ವೇದಮೂರ್ತಿ ಕಮಲಾದೇವಿಪ್ರಸಾದ ಆಸ್ರಣ್ಣ ಅನುಗ್ರಹ ಭಾಷಣ ಮಾಡಿದರು. ಉದ್ಯಮಿ ಮಧುಸೂದನ ಆಯರ್ ಉಪಸ್ಥಿತರಿದ್ದರು.  ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಅಭನಂದನಾ ಭಾಷಣ ನಡೆಸಿದರು. ಯಕ್ಷಗಾನ ಕಲಾವಿದ ಮಾಧವ ಸನ್ಮಾನ ಪತ್ರ ವಾಚಿಸಿದರು. ಶ್ರೀಕೃಷ್ಣ ಭಟ್ ಪುದುಕ್ಕೋಳಿ ಸ್ವಾಗತಿಸಿದರು. ಕೃಷ್ಣಮೂರ್ತಿ ಪುದುಕ್ಕೋಳಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಹೇಶ್ ವಳಕುಂಜ ವಂದಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries