ಕಾಸರಗೋಡು: ಕೇರಳ ಪೊಲೀಸ್ ಅಧಿಕಾರಿಗಳ ಸಂಘಟನೆ(ಕೆಪಿಓಎ) 34ನೇ ಜಿಲ್ಲಾ ಸಮ್ಮೇಳನ ಅಂಗವಾಗಿ ಸಾಮೂಹಿಕ ಓಟ ಸೋಮವಾರ ಕಾಸರಗೋಡಿನಲ್ಲಿ ನಡೆಯಿತು. ಮಾದಕ ದ್ರವ್ಯಕ್ಕೆದುರಾಗಿ ಸಾಮೂಹಿಕ ಓಟ ಆಯೋಜಿಸಲಾಗಿತ್ತು.
ಕಾಸರಗೋಡು ರೈಲ್ವೆ ನಿಲ್ದಾಣ ವಠಾರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಬಿಜೋಯ್ ಓಟಕ್ಕೆ ಚಾಲನೆ ನೀಡಿದರು. ಸ್ವಾಗತ ಸಮಿತಿ ಉಪಾಧ್ಯಕ್ಷ ಟಿ. ತಂಬಾನ್, ಕೆಪಿಎ ಜಿಲ್ಲಾಧ್ಯಕ್ಷ ಬಿ. ರಾಜಕುಮಾರ್, ರಾಜೀವನ್, ಕೆಪಿಒಎ ಜಿಲ್ಲಾ ಕಾರ್ಯದರ್ಶಿ ಪಿ. ರವೀಂದ್ರನ್, ಟಿ. ಗಿರೀಶ್ ಬಾಬು, ಎಂ. ಸದಾಶಿವನ್ ಸಾಮೂಹಿಕ ಓಟಕ್ಕೆ ನೇತೃತ್ವ ನೀಡಿದ್ದರು. ನಗರದ ವಿವಿಧೆಡೆ ಸಂಚರಿಸಿ ಹೊಸ ಬಸ್ ನಿಲ್ದಾಣ ವಠಾರದಲ್ಲಿ ಸಆಮೂಹಿಕ ಓಟ ಸಂಪನ್ನಗೊಂಡಿತು. ಜುಲೈ 13ರಂದು ಕೇರಳ ಪೊಲೀಸ್ ಅಧಿಕಾರಿಗಳ ಸಂಘಟನೆ 34ನೇ ಕಾಸರಗೋಡು ಜಿಲ್ಲಾ ಸಮ್ಮೇಳನ ನಡೆಯಲಿದೆ.