ಮಲಪ್ಪುರಂ: ಕುಟ್ಟಿಪುರಂನಲ್ಲಿ ಮಂಗಳೂರು ಮೇಲ್ ಮೇಲೆ ಕಲ್ಲು ತೂರಾಟ ಘಟನೆ ಗುರುವಾರ ನಡೆದಿದೆ. ಘಟನೆಯಲ್ಲಿ ಒಬ್ಬರು ಗಾಯಗೊಂಡಿದ್ದಾರೆ. ಚಾವಕ್ಕಾಡ್ ಮೂಲದ ಶರಫುದ್ದೀನ್ ಗಾಯಗೊಂಡವರು. ಕುಟ್ಟಿಪುರಂ ಪೆÇಲೀಸ್ ಮತ್ತು ಆರ್‍ಪಿಎಫ್‍ಗೆ ದೂರು ನೀಡಿರುವುದಾಗಿ ಶರಫುದ್ದೀನ್ ಹೇಳಿದ್ದಾರೆ.
ಇಟ್ಟಿಗೆ ಎಸೆತದಿಂದ ಶರಫುದ್ದೀನ್ ಅವರ ಹೊಟ್ಟೆಗೆ ಗಾಯವಾಗಿದೆ. ರೈಲು ಕುಟ್ಟಿಪುರಂನಿಂದ ಸ್ವಲ್ಪ ದೂರ ಸಾಗಿದಾಗ ಕಲ್ಲು ತೂರಾಟ ನಡೆದಿದೆ. ರೈಲಿಗೆ ತಗುಲಿದ ಇಟ್ಟಿಗೆಯ ಒಂದು ಭಾಗ ಶರಫುದ್ದೀನ್ ಅವರ ಹೊಟ್ಟೆಯ ಮೇಲೆ ಬಿದ್ದಿತ್ತು.
ಸಮಾಜಘಾತುಕರಿಂದ ದಾಳಿಗೊಳಗಾದ ಅವರು ತಕ್ಷಣ ಪೋಲೀಸರು ಮತ್ತು ಆರ್‍ಪಿಎಫ್ ಅಧಿಕಾರಿಗಳಿಗೆ ಕರೆ ಮಾಡಿದ್ದಾರೆ. ಶರಫುದ್ದೀನ್ ನೀಡಿದ ದೂರಿನ ಮೇರೆಗೆ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.