HEALTH TIPS

ಮೊಬೈಲ್ ಫೋನ್ ಆಗಾಗ ಹ್ಯಾಂಗ್ ಆಗುತ್ತಿದೆಯೇ? ಈ ಸಿಂಪಲ್ ಟ್ರಿಕ್‌ನಿಂದ ಸಮಸ್ಯೆ ಬಗೆಹರಿಸಿ

Top Post Ad

Click to join Samarasasudhi Official Whatsapp Group

Qries

 ತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳಲ್ಲಿ ನಾವು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆ ಎಂದರೆ ಸ್ಮಾರ್ಟ್​ಫೋನ್ ಹ್ಯಾಂಗ್ ಆಗುವುದು. ಪ್ರತಿಯೊಂದು ಸ್ಮಾರ್ಟ್‌ಫೋನ್, ಅದು ಯಾವುದೇ ಬ್ರ್ಯಾಂಡ್ ಆಗಿರಬಹುದು, ಒಂದು ಹಂತದಲ್ಲಿ ಅಥವಾ ದೀರ್ಘಕಾಲದವರೆಗೆ ಬಳಸಿದ ನಂತರ ಆಗಾಗ್ಗೆ ಹ್ಯಾಂಗ್ ಆಗಲು ಪ್ರಾರಂಭಿಸುತ್ತದೆ.

ಇಂಪಾರ್ಟೆಂಟ್ ಕರೆ ಬಂದಾಗ ಅಥವಾ ಏನಾದರು ಎಮರ್ಜೆನ್ಸಿ ಇದ್ದಾಗ ಫೋನ್ ಹ್ಯಾಂಗ್ ಆದರೆ ತುಂಬಾ ತೊಂದರೆ ಆಗುತ್ತದೆ. ನಿಮ್ಮ ಫೋನ್‌ನಲ್ಲಿ ಕೂಡ ಈ ಸಮಸ್ಯೆ ಇದ್ದರೆ, ಅದನ್ನು ಸರಿಪಡಿಸಲು ಇಲ್ಲಿದೆ ನೋಡಿ ಕೆಲವೊಂದು ಟಿಪ್ಸ್.

ಸ್ಮಾರ್ಟ್‌ಫೋನ್ ಹ್ಯಾಂಗ್ ಆಗಲು ಯಾವುದಾದರು ಒಂದು ಕಾರಣ ಎಂದು ಹೇಳಲಾಗುವುದಿಲ್ಲ. ಹಲವಾರು ಕಾರಣಗಳಿಂದ ನಿಮ್ಮ ಫೋನ್ ಹ್ಯಾಂಗ್ ಸಮಸ್ಯೆ ಕಾಣಿಸುತ್ತದೆ. ಉದಾಹರಣೆಗೆ, ನಿಮ್ಮ ಫೋನ್ RAM ತುಂಬಿರಬಹುದು ಅಥವಾ ಅಗತ್ಯಕ್ಕಿಂತ ಹೆಚ್ಚು ಅಪ್ಲಿಕೇಶನ್‌ಗಳು ರನ್ ಆಗುತ್ತಿರಬಹುದು ಅಥವಾ ಫೋನ್ ಅನ್ನು ಅಪ್ಡೇಟ್ ಮಾಡದೆ ಇರಬಹುದು. ಇವುಗಳಲ್ಲಿ ಯಾವುದಾದರೂ ಕಾರಣದಿಂದ ಫೋನ್ ಸ್ಥಗಿತಗೊಳ್ಳುತ್ತದೆ. ಫೋನ್ ಹ್ಯಾಂಗ್ ಆಗುವುದನ್ನು ತಡೆಯುವುದು ಹೇಗೆ ಎಂಬುದನ್ನು ನೋಡೋಣ.

ಸಾಫ್ಟ್‌ವೇರ್ ಅಪ್ಡೇಟ್‌ ಮಾಡಿ

ಸ್ಮಾರ್ಟ್‌ಫೋನ್ ಖರೀದಿಸಿ ಆನ್ ಮಾಡಿದಾಗ ಅದು ನಿರ್ದಿಷ್ಟ ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ರನ್ ಆಗುತ್ತದೆ. ಆದರೆ, ಕಂಪನಿಗಳು ಪ್ರತಿ ವರ್ಷ ಹೊಸ OS ಅಪ್ಡೇಟ್ ನೀಡುತ್ತದೆ. OS ನವೀಕರಣಗಳ ಜೊತೆಗೆ, ಕಂಪನಿಗಳು ಕಾಲಕಾಲಕ್ಕೆ ಭದ್ರತಾ ನವೀಕರಣಗಳನ್ನು ಸಹ ಬಿಡುಗಡೆ ಮಾಡುತ್ತವೆ. ಸ್ಮಾರ್ಟ್‌ಫೋನ್‌ನ ಕಾರ್ಯವೈಖರಿಯನ್ನು ಕಾಪಾಡಿಕೊಳ್ಳಲು ಅಥವಾ ಹೆಚ್ಚಿಸಲು ಈ ನವೀಕರಣಗಳು ಉಪಯುಕ್ತವಾಗಿವೆ. ಆದರೆ, ಈ ಅಪ್ಡೇಟ್ ಅನ್ನು ನಿರ್ಲಕ್ಷಿಸುವ ಅನೇಕ ಬಳಕೆದಾರರಿದ್ದಾರೆ. ಹೀಗೆ ಮಾಡಿದಾಗ ಫೋನ್‌ ಸ್ಲೋ ಆಗಲು ಪ್ರಾರಂಭಿಸುತ್ತದೆ. ದಿಢೀರ್ ಆಗಿ ಫೋನ್ ಸ್ವಿಚ್ ಆಫ್ ಕೂಡ ಆಗಬಹುದು.

ಅನಗತ್ಯ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಿ

ಅನಗತ್ಯ ಅಪ್ಲಿಕೇಶನ್‌ಗಳನ್ನು ಇನ್​ಸ್ಟಾಲ್ ಮಾಡುವ ಅನೇಕ ಬಳಕೆದಾರರಿದ್ದಾರೆ. ಒಮ್ಮೆ ಬಳಸಿ ನಂತರ ಅದು ಮೂಲೆಯಲ್ಲಿರುತ್ತದೆ. ಅಗತ್ಯಕ್ಕಿಂತ ಹೆಚ್ಚಿನ ಅಪ್ಲಿಕೇಶನ್‌ಗಳನ್ನು ಹೊಂದಿದ್ದರೆ, ಅದು ಫೋನ್‌ನ ವೇಗದ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ ಫೋನ್ ಹ್ಯಾಂಗ್ ಆಗಲು ಕಾರಣವಾಗುತ್ತದೆ. ಅದಕ್ಕಾಗಿ ನಿಮ್ಮ ಸ್ಮಾರ್ಟ್​ಫೋನ್​ನಲ್ಲಿರುವ ಅನಗತ್ಯ ಅಪ್ಲಿಕೇಶನ್ ಅನ್ನು ತೆಗೆದುಹಾಕುವುದು ಉತ್ತಮ.

ಅಪ್ಲಿಕೇಶನ್‌ಗಳನ್ನು ಅಪ್ಡೇಟ್ ಮಾಡಿ

ನೀವು ಅಪ್ಡೇಟ್ ನೀಡಿದ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಫೋನ್ ರನ್ ಆಗುತ್ತದೆ. ಆದರೆ, ಹಲವು ಬಾರಿ ಹಳೆಯ ಆಯಪ್​ಗಳನ್ನು ಹಾಗೆಯೆ ಇಟ್ಟುಕೊಂಡಿರುತ್ತೇವೆ. ಆಯಪ್​ಗಳ ಅಪ್ಡೇಟ್ ಮಾಡುವುದು ಕೂಡ ಮುಖ್ಯ. ಏಕೆಂದರೆ ಆಯಪ್ ಅಪ್ಡೇಟ್ ಆಗದಿದ್ದರೆ ಫೋನ್ ಹ್ಯಾಂಗ್ ಆಗಲು ಶುರುವಾಗುತ್ತದೆ.

RAM ತುಂಬಿದಾಗಲೂ ಫೋನ್ ಹ್ಯಾಂಗ್ ಆಗುತ್ತದೆ

RAM ತುಂಬಿದಾಗಲೂ ಫೋನ್ ಹ್ಯಾಂಗ್ ಆಗುತ್ತದೆ. ಇದನ್ನು ಗಮನಿಸುತ್ತಲೇ ಇರಬೇಕು. ನಿಮ್ಮ ಬಿಡುವಿನ ಸಂದರ್ಭ RAM ಅನ್ನು ಕ್ಲೀಯರ್ ಮಾಡಲು ಮರಿಬೇಡಿ.

ರೀ-ಸೆಟ್ ಮಾಡಿ

ಮೇಲಿನ ಯಾವುದೇ ಟ್ರಿಕ್ ಸಹಾಯ ಮಾಡದಿದ್ದರೆ ನೀವು ಈ ಕೊನೆಯ ಆಯ್ಕೆಯನ್ನು ಪ್ರಯತ್ನಿಸಬಹುದು. ಫೋನ್ ಉತ್ತಮವಾಗಿ ಕಾರ್ಯನಿರ್ವಹಿಸಲು ರೀ-ಸೆಟ್ ಮಾಡುವುದು ಕೊನೆಯ ಆಪ್ಷನ್ ಆಗಿದೆ. ಈ ಸಂದರ್ಭ ನಿಮ್ಮ ಫೋನ್‌ನಲ್ಲಿರುವ ಫೋಟೋಗಳು ಅಥವಾ ವಿಡಿಯೋಗಳಂತಹ ಪ್ರಮುಖ ಫೈಲ್‌ಗಳನ್ನು ಹೊಂದಿದ್ದರೆ, ನೀವು ಅವುಗಳನ್ನು ಪೆನ್ ಡ್ರೈವ್‌ನಲ್ಲಿ ಸೇವ್ ಮಾಡಬೇಕು. ಬ್ಯಾಕಪ್ ಅನ್ನು ಸಹ ತೆಗೆದುಕೊಳ್ಳಬಹುದು. ಹೀಗೆ ಮಾಡುವುದರಿಂದ ಫೋನ್ ಹ್ಯಾಂಗ್ ಆಗುವುದು ನಿಂತು ವೇಗವಾಗಿ ಕೆಲಸ ಮಾಡುತ್ತದೆ.






Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries