ತಿರುವನಂತಪುರಂ: ತಂಬಾನೂರಿನಲ್ಲಿ ಕಾರ್ಯಾಚರಿಸುತ್ತಿರುವ ಪೆÇೀತೀಸ್ ಸ್ವರ್ಣ ಮಹಲ್ ನ್ನು ಮುಚ್ಚುಗಡೆಗೊಳಿಸಲಾಗಿದೆ. ಅಮಾಜಂಚನ್ ತೊರೆಗೆ ಶೌಚಾಲಯ ತ್ಯಾಜ್ಯ ಸುರಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಪೋಲೀಸರು ಹಾಗೂ ನಗರಸಭೆಯ ಆರೋಗ್ಯ ಇಲಾಖೆಯ ಅಧಿಕಾರಿಗಳು ಸಂಸ್ಥೆಗೆ ಆಗಮಿಸಿ ಬೀಗ ಹಾಕಿದರು. ಸಂಸ್ಥೆಯು ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸುತ್ತಿರುವುದು ತನಿಖೆಯಲ್ಲಿ ಕಂಡುಬಂದಿದೆ.
ಪೆÇೀತ್ತೀಸ್ ಸ್ವರ್ಣ ಮಹಲ್‍ನಿಂದ ಶೌಚಾಲಯದ ತ್ಯಾಜ್ಯವನ್ನು ಚರಂಡಿಗೆ ಸುರಿಯುತ್ತಿರುವ ವಿಡಿಯೊ ದೃಶ್ಯಾವಳಿ ಪಾಲಿಕೆಗೆ ಸಿಕ್ಕಿತ್ತು. ನಂತರದ ಪರೀಕ್ಷೆಯಲ್ಲಿ ಇದು ಸರಿ ಎಂದು ಸಾಬೀತಾಯಿತು. ಪಾಲಿಕೆಯ ದೂರಿನ ಮೇರೆಗೆ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆಯುತ್ತಿದ್ದ ಸಂಸ್ಥೆಯ ವಿರುದ್ಧ ತಂಬಾನೂರು ಪೋಲೀಸರು ಪ್ರಕರಣ ದಾಖಲಿಸಿಕೊಂಡು ಸಂಸ್ಥೆಯನ್ನು ಮುಚ್ಚಿದ್ದರು.
ಅಟ್ಟಕುಳಂಗರ ರಾಮಚಂದ್ರ ಟೆಕ್ಸ್‍ಟೈಲ್ಸ್‍ನವರು ತ್ಯಾಜ್ಯವನ್ನು ಚರಂಡಿಗೆ ಸುರಿಯುತ್ತಿರುವ ದೃಶ್ಯಾವಳಿಯೂ ಲಭಿಸಿದೆ. ಕೆಆರ್‍ಎಫ್‍ಬಿಯ ನಾಲೆಗೆ ತ್ಯಾಜ್ಯ ಸೇರುತ್ತಿರುವುದು ಪರಿಶೀಲನೆಯಲ್ಲಿ ಪತ್ತೆಯಾಗಿದೆ. ಬಳಿಕ ಎಫ್‍ಐಆರ್ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಎಸ್‍ಎಚ್‍ಒಗೆ ಸೂಚಿಸಲಾಗಿದೆ ಎಂದು ಮೇಯರ್ ತಿಳಿಸಿರುವರು.