ಆಲಪ್ಪುಳ: ಕಾರ್ಗಿಲ್ ವಿಜಯ ದಿವಸದ ಸಂದರ್ಭದಲ್ಲಿ ದೇಶದಲ್ಲಿ ಸ್ಮರಣಾರ್ಥ ಕಾರ್ಯಕ್ರಮಗಳು ನಡೆಯುತ್ತಿದ್ದು, ಭಾರತ ವಿರೋಧಿ ನಿಲುವುಗಳೊಂದಿಗೆ ಬ್ಯಾಂಕ್ ಆಫ್ ಇಂಡಿಯಾ ಸಿಬ್ಬಂದಿ ಒಕ್ಕೂಟದ ರಾಜ್ಯ sದೇಶ ವಿರೋಧಿ ಕ್ರಮ ಅನುಸರಿಸಿದೆಯೆಂದು ತಿಳಿದುಬಂದಿದೆ.
ಆಲಪ್ಪುಳದ ಪಾಲಿ ಜಾರ್ಜ್ ನಗರದಲ್ಲಿ ನಡೆಯುತ್ತಿರುವ ೨೩ನೇ ರಾಜ್ಯ ಸಮ್ಮೇಳನದಲ್ಲಿ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರ ಸ್ಮರಣಾರ್ಥ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಒಕ್ಕೂಟವು ತನ್ನ ನಿಲುವನ್ನು ಬಯಲುಗೊಳಿಸಿದೆ.
ರಾಜ್ಯ ಸಮ್ಮೇಳನದ ಕಲಾಪದಲ್ಲಿ ಮುಷರಫ್ ಅವರ ಗೌರವಾನ್ವಿತ ಉಲ್ಲೇಖವಿದೆ. ಕಾರ್ಯಕ್ರಮವನ್ನು ಐಐಸಿಸಿ ಪ್ರಧಾನ ಕಾರ್ಯದರ್ಶಿ, ಸಂಸದ ಕೆ. ಸಿ ವೇಣುಗೋಪಾಲ್ ಉದ್ಘಾಟಿಸುವರು. ೧೯೯೯ ರಲ್ಲಿ ಕಾಶ್ಮೀರಕ್ಕೆ ಭಯೋತ್ಪಾದಕರನ್ನು (ವಾಸ್ತವವಾಗಿ ಅವರು ಪಾಕ್ ರೇಂಜರ್‌ಗಳಿಗಾಗಿ ಕೆಲಸ ಮಾಡುವ ಸೈನಿಕರು) ಬಗ್ಗುಬಡಿದ ಕಾರ್ಗಿಲ್ ವಿಜಯೋತ್ಸವದ ೨೫ ನೇ ವಾರ್ಷಿಕೋತ್ಸವದಂದು ಪರ್ವೇಜ್ ಮುಷರಫ್ ಅವರ ಸ್ಮರಣೆ ಮಾಡಿ ಬ್ಯಾನರ್ ಹಾಕಿರುವುಉದ ಅತಾರ್ಕಿಕವೆನಿಸಿದೆ. ಪರ್ವೇಜ್ ಮುಷರಫ್ ಅವರ ಆದೇಶದ ಮೇರೆಗೆ ಭಾರತೀಯ ಸೇನೆ ಉಗ್ರರನ್ನು ಬಗ್ಗುಬಡಿಯಿತು ಎಂದು ಕುತೂಹಲಕಾರಿಯಾದ ಬರಹವನ್ನೂ ಸೇರಿಸಲಾಗಿದೆ.
ಕಾರ್ಗಿಲ್ ಯುದ್ಧದಲ್ಲಿ ೫೬೭ ಸೈನಿಕರು ಪ್ರಾಣ ಕಳೆದುಕೊಂಡರು ಮತ್ತು ೧೩೦೦ ಕ್ಕೂ ಹೆಚ್ಚು ಸೈನಿಕರು ಅಂಗವಿಕಲರಾಗಿದ್ದರು. ಕಾರ್ಗಿಲ್ ವಿಜಯ್ ದಿವಸ್ ಅನ್ನು ಭಾರತದಲ್ಲಿ ಪ್ರತಿ ವರ್ಷ ಜುಲೈ ೨೬ ರಂದು ಆಚರಿಸಲಾಗುತ್ತದೆ. ಈ ಐತಿಹಾಸಿಕ ವಿಜಯದ ಮೂಲಕ ಭಾರತೀಯ ಸೇನೆಯು ಕಾರ್ಗಿಲ್, ಲಡಾಖ್ ಮತ್ತು ಈ ಹಿಂದೆ ಪಾಕಿಸ್ತಾನ ಸೇನೆಯ ವಶದಲ್ಲಿದ್ದ ಎಲ್ಲಾ ಆಯಕಟ್ಟಿನ ಪ್ರದೇಶಗಳನ್ನು ವಶಪಡಿಸಿಕೊಂಡಿದೆ. ಈ ದಿನವು ದೇಶದ ಸಾರ್ವಭೌಮತ್ವವನ್ನು ಧೈರ್ಯದಿಂದ ರಕ್ಷಿಸಿದ ಭಾರತೀಯ ಸೈನಿಕರ ಶೌರ್ಯ ಮತ್ತು ತ್ಯಾಗವನ್ನು ಸ್ಮರಿಸುತ್ತದೆ.
ಪಾಕಿಸ್ತಾನದ ವಿರುದ್ಧದ ಈ ವಿಜಯವು ಯುದ್ಧದ ಸಮಯದಲ್ಲಿ ಭಾರತೀಯ ಸೇನೆಯ ಪ್ರಮುಖ ಕ್ಷಣಗಳಲ್ಲಿ ಒಂದಾಗಿದೆ. ಈ ಬಗ್ಗೆ ಬ್ಯಾಂಕ್ ಆಫ್ ಇಂಡಿಯಾ ಸಿಬ್ಬಂದಿ ಸಂಘ ಅವಹೇಳನಕಾರಿ ನಿಲುವು ತಳೆದಿರುವುದು ರಾಷ್ಟçದ್ರೋಹದ ಕಾನೂನು ಕ್ರಮಕ್ಕೆ ಕಾರಣವಬಾಗುವ ಸಾಧ್ಯತೆಯಿದೆ..