ನವದೆಹಲಿ:ಮಹತ್ವಾಕಾಂಕ್ಷೆಯ 'ಭಾರತ್ ಅಕ್ಕಿ' ಯೋಜನೆಗೆ ಹೊಸ ಪಾಲಿಸಿ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಇದಕ್ಕೆ ಸಂಬಂಧಪಟ್ಟ ಪ್ರಕ್ರಿಯೆಗಳು ಶುರುವಾಗಿದ್ದು, ಶ್ರೀಘ್ರದಲ್ಲೇ ಪಾಲಿಸಿ ಅನುಷ್ಠಾನಕ್ಕೆ ಬರುವ ಸಾಧ್ಯತೆ ಇದೆ.
ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಬಿಪಿಎಲ್ ಕಾರ್ಡ್ನಲ್ಲಿ ಪ್ರತಿ ಸದಸ್ಯನಿಗೆ 5 ಕೆಜಿ ಅಕ್ಕಿ,ಅಂತ್ಯೋದಯ ಕಾರ್ಡ್ಗೆ 35 ಕೆಜಿ ಅಕ್ಕಿಯನ್ನು ಕೇಂದ್ರ ಸರ್ಕಾರ, ನ್ಯಾಯಬೆಲೆ ಅಂಗಡಿಗಳ ಮೂಲಕ ಪ್ರತಿ ತಿಂಗಳು ಉಚಿತವಾಗಿ ವಿತರಿಸುತ್ತಿದೆ.
ಆರಂಭದಲ್ಲಿ ರಾಜ್ಯದ ಕೆಲವೆಡೆ ಟೆಂಪೊಗಳಲ್ಲಿ ಸಾಮಗ್ರಿಗಳನ್ನು ತಂದು ಹೆಸರು, ಮೊಬೈಲ್ ಸಂಖ್ಯೆ ನಮೂದಿಸಿ 10 ಕೆಜಿ ಅಕ್ಕಿ, ಕೆಲವು ಜಿಲ್ಲೆಗಳಲ್ಲಿ ಹತ್ತು ಕೆಜಿ ಗೋಧಿ -ಹಿಟ್ಟು ಬ್ಯಾಗ್ ಮಾರಾಟ ಮಾಡುತ್ತಿತ್ತು. ರಾಜ್ಯಾದ್ಯಂತ ಈವರೆಗೆ 40 ಸಾವಿರ ಮೆಟ್ರಿಕ್ ಅಕ್ಕಿ ಮಾರಾಟ ಮಾಡಿದೆ. ಭಾರತ್ ಅಕ್ಕಿಗೆ ಈಗಾಗಲೇ ಗ್ರಾಹಕರಿಂದ ಹೆಚ್ಚಿನ ಬೇಡಿಕೆ ಬಂದಿದೆ. ಆದರೆ, ಗೋದಾಮುಗಳಲ್ಲಿ ದಾಸ್ತಾನು ಇಲ್ಲದ ಪರಿಣಾಮ ಅಕ್ಕಿ ವಿತರಣೆಯನ್ನು ಸದ್ಯ ನಿಲ್ಲಿಸಲಾಗಿದೆ. ಯೋಜನೆ ಸಂಬಂಧಿಸಿದಂತೆ ಹೊಸ ಪಾಲಿಸಿ ತರಲು ಕೇಂದ್ರ ಸರ್ಕಾರ, ರೂಪುರೋಷ ಸಿದ್ಧಪಡಿಸಿಸುತ್ತಿದೆ. ಡಿ&ಮಾರ್ಟ್ ಸೇರಿ ಸೂಪರ್ ಮಾರ್ಕೆಟ್ಗಳಲ್ಲಿ ಮಾರಾಟ ಸೇರಿ ಇತರೆ ಅಂಶಗಳು ಪಾಲಿಸಿಯಲ್ಲಿವೆ ಎನ್ನಲಾಗಿದೆ.
See alsoವೈಯಕ್ತಿಕ ಹೇಳಿಕೆ, ಸರ್ಕಾರದ್ದಲ್ಲ: ಮೋದಿ ವಿರುದ್ಧ ಸಚಿವೆ ಶಿಯುನಾ ಅವಹೇಳನಕಾರಿ ಅಭಿಪ್ರಾಯಕ್ಕೆ ಮಾಲ್ಡೀವ್ಸ್ ಸ್ಪಷ್ಟನೆ
ಯೋಜನೆ ವಿವರ:
* 2024ರ ಫೆ.2 ರಿಂದ ಆರಂಭ
* 40 ಸಾವಿರ ಟನ್ ಮಾರಾಟ
* ಅಕ್ಕಿ 29 ರೂ., ಗೋಧಿ ಹಿಟ್ಟು 27.50 ರೂ. ಕಡ್ಲೆಬೇಳೆ 60 ರೂ.
* ಅಕ್ಕಿ, ಗೋ-ಧಿ ತಲಾ 10 ಕೆ.ಜಿ., ಕಡ್ಲೆಬೇಳೆ 5 ಕೆ.ಜಿ. ಬ್ಯಾಗ್
ಗೋದಾಮುಗಳಲ್ಲಿ ದಾಸ್ತಾನು ಇಲ್ಲದ ಪರಿಣಾಮ 'ಭಾರತ್ ಅಕ್ಕಿ' ಮಾರಾಟವನ್ನು ಸದ್ಯ ನಿಲ್ಲಿಸಲಾಗಿದೆ. ಯೋಜನೆ ಸಂಬಂಧ ಕೇಂದ್ರ ಸರ್ಕಾರ ಹೊಸ ನೀತಿ ತರಲು ರೂಪುರೇಷ ಸಿದ್ಧಪಡಿಸುತ್ತಿದೆ. ಸದ್ಯದಲ್ಲೇ ಇದು ಜಾರಿಗೆ ಬರುವ ಸಾಧ್ಯತೆ ಇದೆ. ಹೊಸ ಪಾಲಿಸಿಯ ಸಂಪೂರ್ಣ ವಿವರ ಇನ್ನೂ ನಮಗೆ ಸಿಕ್ಕಿಲ್ಲ.
-ವಿನಯ್ಕುಮಾರ್, ಕರ್ನಾಟಕ ವಿಭಾಗದ ಮುಖ್ಯಸ್ಥ, ನಾಫೆಡ್.