ಬದಿಯಡ್ಕ: ಎಡನೀರು ಮಠಾಧೀಶರಾದ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳ ನಾಲ್ಕನೇ ಚಾತುರ್ಮಾಸ್ಯದ ಅಂಗವಾಗಿ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನಿನ್ನೆ ಶ್ರೀಮಠದ ಸಭಾಂಗಣದಲ್ಲಿ ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ನಾಟಕ ಸಭಾ ಕೂಡ್ಲು ಇವರಿಂದ ಯಕ್ಷಗಾನ ಬಯಲಾಟ ನಡೆಯಿತು
ಹಿರಣ್ಯಾಕ್ಷ ವಧೆ ಆಖ್ಯಾಯಿಕೆಯ ಪ್ರದರ್ಶನದ ಹಿಮ್ಮೇಳದಲ್ಲಿ ತಲ್ಪನಾಜೆ ವೆಂಕಟ್ರಮಣ ಭಟ್, ವಾಸುದೇವ ಕಲ್ಲೂರಾಯ ಮಧೂರು(ಭಾಗವತಿಕೆ).ಹರೀಶ್ ರಾವ್ ಅಡೂರು, ಲಕ್ಷಿö್ಮÃಶ ಬೆಂಗ್ರೋಡಿ(ಚೆAಡೆ-ಮೃದAಗ)ದಲ್ಲಿ ಪ್ರದರ್ಶನ ಮುನ್ನಡೆಸಿದರು. ಮುಮ್ಮೇಳದಲ್ಲಿ ಧರ್ಮೇಂದ್ರ ಆಚಾರ್ಯ, ಓಂ ಪ್ರಕಾಶ್, ಅನ್ವಿತ್, ಸ್ವಸ್ತಿಕ್, ಲತೇಶ್ ಆಚಾರ್ಯ, ನವೀನಚಂದ್ರ, ರಂಜಿತ್ ಗೋಳಿಯಡ್ಕ, ಅರ್ಜುನ್, ರಾಮಚಂದ್ರ ಹೊಳ್ಳ, ನಾಗೇಶ್ ಆಚಾರ್ಯ, ರಾಕೇಶ್ ಗೋಲಿಯಡ್ಕ ಪಾತ್ರಗಳನ್ನು ನಿರ್ವಹಿಸಿದರು.