HEALTH TIPS

ಭಾರತ ಭರವಸೆ ಮತ್ತು ಸಾಧ್ಯತೆಗಳ ನಾಡು: ಉಪರಾಷ್ಟ್ರಪತಿ

                 ತಿರುವನಂತಪುರಂ: ಭಾರತವು ಭರವಸೆ ಮತ್ತು ಸಾಧ್ಯತೆಗಳ ನಾಡು ಮತ್ತು ಜಗತ್ತು ಅದನ್ನು ಒಪ್ಪಿಕೊಳ್ಳುತ್ತದೆ ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ ಹೇಳಿದರು.

                   ತಿರುವನಂತಪುರಂನಲ್ಲಿರುವ ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ 12ನೇ ಘಟಿಕೋತ್ಸವವನ್ನು ನಿನ್ನೆ ಉದ್ಘಾಟಿಸಿ ಅವರು ಮಾತನಾಡಿದರು.

                   ಕಳೆದ ವರ್ಷದ ಬಾಹ್ಯಾಕಾಶ ಯಾತ್ರೆಗಳು ಶ್ಲಾಘನೀಯ. ಚಂದ್ರಯಾನ ಮತ್ತು ಆದಿತ್ಯ ಎಲ್1 ಮಿಷನ್‍ಗಳು ಇಸ್ರೋದಿಂದ ಸಾಧ್ಯವಾಯಿತು. ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ದೇಶ ಎಂಬ ಹೆಮ್ಮೆ ನಮಗಿರಬೇಕು. ಭಾರತದ ಬಾಹ್ಯಾಕಾಶ ಸಾಧನೆಯನ್ನು ಜಾಗತಿಕ ರಾಷ್ಟ್ರಗಳು ಗುರುತಿಸಿವೆ. ಈ ಶತಮಾನ ಭಾರತದ್ದು. ಭಾರತ ಏರುಗತಿಯಲ್ಲಿದೆ. ಆ ಬೆಳವಣಿಗೆಯನ್ನು ಯುವಜನರು ನಡೆಸುತ್ತಿದ್ದಾರೆ. ಇದು 2047 ರಲ್ಲಿ ಉತ್ತುಂಗಕ್ಕೇರುತ್ತದೆ. ಆದರೆ ನಾವು 2047 ರ ಮೊದಲು ಅಭಿವೃದ್ಧಿ ಹೊಂದಿದ ಭಾರತವಾಗುತ್ತೇವೆ ಎಂದು ನಂಬಿದ್ದೇವೆ. ದೇಶವು ಮೂರನೇ ಅತಿದೊಡ್ಡ ಜಾಗತಿಕ ಆರ್ಥಿಕತೆಯಾಗುವ ಹಾದಿಯಲ್ಲಿದೆ. ಯುವಕರು ಬೆಳೆಯಲು ಉತ್ತಮ ವಾತಾವರಣವನ್ನು ದೇಶ ಹೊಂದಿದೆ ಮತ್ತು ಅವರ ಆಸಕ್ತಿ ಮತ್ತು ಕೌಶಲ್ಯಗಳನ್ನು ಭಾರತದಲ್ಲಿ ಅಭಿವೃದ್ಧಿಪಡಿಸಬಹುದು ಎಂದು ಉಪರಾಷ್ಟ್ರಪತಿ ಹೇಳಿದರು.

                    ವಿದ್ಯಾರ್ಥಿಗಳು ಇಸ್ರೋ ಸೇರಿದಂತೆ ರಾಷ್ಟ್ರದ ಪ್ರಗತಿಯ ಭಾಗವಾಗಲು ಸಾಧ್ಯವಾಗುತ್ತಿರುವುದು ಹೆಮ್ಮೆಯ ಸಂಗತಿ. ಪ್ರತಿಯೊಬ್ಬ ಪದವೀಧರನೂ ಪ್ರತಿ ಕ್ಷಣವೂ ಜಗತ್ತಿನಲ್ಲಿನ ಬದಲಾವಣೆಗಳೊಂದಿಗೆ ಕೆಲಸ ಮಾಡಲು ಸಾಧ್ಯವಾಗುತ್ತದೆ. ಇಂದು, ಪ್ರಪಂಚದ ಗಮನವು ಲಿಥಿಯಂ ಮತ್ತು ಸೋಡಿಯಂನಂತಹ ಅಂಶಗಳ ಭವಿಷ್ಯದ ಸಾಮಥ್ರ್ಯದ ಮೇಲೆ ಕೇಂದ್ರೀಕೃತವಾಗಿದೆ. ಹೈಡ್ರೋಜನ್ ಅನ್ನು ಇಂಧನವಾಗಿ ಬಳಸುವ ಮೂಲಕ ಹಸಿರು ಶಕ್ತಿಯ ಸಾಮಥ್ರ್ಯವನ್ನು ಬಳಸಿಕೊಳ್ಳಲು ಭಾರತ ಈಗಾಗಲೇ ತನ್ನ ಕ್ರಿಯಾ ಯೋಜನೆಯನ್ನು ಪ್ರಾರಂಭಿಸಿದೆ. ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ ಮತ್ತು ಬ್ಲಾಕ್ ಚೈನ್ ನಿರ್ವಹಣೆಯಂತಹ ಹೊಸ ವಿಷಯಗಳು ಹೆಚ್ಚು. ಈ ಎಲ್ಲಾ ಸಾಧ್ಯತೆಗಳನ್ನು ತಿಳಿದುಕೊಳ್ಳುವುದು ಮತ್ತು ಅಧ್ಯಯನ ಮಾಡುವುದು ಇಂದಿನ ಅಗತ್ಯವಾಗಿದೆ. ವೇಗವಾಗಿ ಬದಲಾಗುತ್ತಿರುವ ಕ್ಷೇತ್ರವಾಗಿ ಬಾಹ್ಯಾಕಾಶ ತಂತ್ರಜ್ಞಾನದಲ್ಲಿನ ಬದಲಾವಣೆಗಳನ್ನು ಅಳವಡಿಸಿಕೊಳ್ಳುವ ಜವಾಬ್ದಾರಿಯನ್ನು ವಿದ್ಯಾರ್ಥಿ ಸಂಘ ಹೊಂದಿದೆ.  ಸಂಶೋಧನೆಯ ಫಲಿತಾಂಶಗಳನ್ನು ಭಾರತದ ಕೋಟ್ಯಂತರ ಜನರಿಗೆ ಪ್ರಯೋಜನವಾಗುವ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ಹೇಳಿದರು. ವೈಫಲ್ಯಕ್ಕೆ ಹೆದರಬೇಡಿ. ಬರಲಿರುವ ವಿಜಯಗಳ ಮುನ್ನುಡಿಯಾಗಿ ಕಂಡರೆ ಸಾಕು ಎಂದರು. ಐಐಎಸ್ ಟಿ ಪದವಿಯನ್ನು ಉಪರಾಷ್ಟ್ರಪತಿ ಪ್ರದಾನ ಮಾಡಿದರು. ಉಪರಾಷ್ಟ್ರಪತಿಗಳ ಪತ್ನಿ ಸುದೇಶ್ ಧನಕರ್ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ನಗದು ಪುರಸ್ಕಾರವನ್ನು ನೀಡಿದರು.

                ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್, ಕುಲಪತಿ ಡಾ. ಬಿ.ಎನ್. ಸುರೇಶ್, ಐಐಎಸ್‍ಟಿ ನಿರ್ದೇಶಕ ಎಸ್. ಉಣ್ಣಿಕೃಷ್ಣನ್ ನಾಯರ್, ಎಲ್‍ಪಿಎಸ್‍ಸಿ ನಿರ್ದೇಶಕ ಡಾ. ವಿ. ನಾರಾಯಣನ್, ಕುಲಸಚಿವ ಪ್ರೊ. ಕುರುವಿಳ ಜೋಸೆಫ್ ಮತ್ತಿತರು ಉಪಸ್ಥಿತರಿದ್ದರು. ಉಪರಾಷ್ಟ್ರಪತಿ ಮತ್ತವರ ಪತ್ನಿ ಆವರಣದಲ್ಲಿ ಸಸಿ ನೆಟ್ಟರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries