ಕಾಸರಗೋಡು : ಜಿಲ್ಲೆಯಲ್ಲಿ ಕರ್ನಾಟಕದಿಂದ ಪೂರೈಕೆಯಾಗುವ ಹಾಲಿನ ಪ್ಯಾಕೆಟ್ ಹಾಗೂ ಹಾಲಿನ ಉತ್ಪನ್ನಗಳಿಗೆ ಹೆಚ್ಚಿನ ದರ ವಿಧಿಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ತೂಕ ಮತ್ತು ಅಳತೆ ಇಲಾಖೆ ನಡೆಸಿದ ತಪಾಸಣೆಯಲ್ಲಿ ಹೆಚ್ಚಿನ ದರ ವಿಧಿಸಿರುವ ಬಗ್ಗೆ ಆರು ಪ್ರಕರಣಗಳು ದಾಖಲಾಗಿವೆ.
ಹಾಲಿನ ಪ್ಯಾಕೆಟ್‍ಗಳಿಗೆ ಗರಿಷ್ಠ ಮುದ್ರಿತ ದರ26ರೂ. ಇದ್ದಲ್ಲಿ, ಇದನ್ನು 28 ರಿಂದ 30 ರೂ.ಶುಲ್ಕ ವಿಧಿಸಿ ಮಾರಾಟ ಮಾಡಿದ ಅಂಗಡಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನಂದಿನಿ ಬ್ರಾಂಡ್‍ನ ಹಾಲಿನ ಪ್ಯಾಕೆಟ್‍ಗಳಲ್ಲಿ ಗರಿಷ್ಠ ದರಕ್ಕಿಂತ ಹೆಚ್ಚಿನ ದರ ವಸೂಲಿ ಮಾಡುವ ಮೂಲಕ ಹಾಲಿನ ಪ್ಯಾಕೆಟ್‍ಗಳನ್ನು ಮಾರಾಟ ಮಾಡುವುದರ ವಿರುದ್ಧ ತಪಾಸಣೆ ಚುರುಕುಗೊಳಿಸಲಾಗಿದೆ. ಜಿಲ್ಲೆಯ ಕಾಸರಗೋಡು ನಗರ ಸೇರಿದಂತೆ ಗಡಿ ಭಾಗಗಳಲ್ಲಿಯೂ ಈ ರೀತಿಯ ಕಾನೂನು ಉಲ್ಲಂಘನೆಯಾಗಿರುವುದು ಕಂಡು ಬಂದಿದ್ದು, ನಾಗರಿಕರ ಸೂಚನೆ ಮೇರೆಗೆ ಸಹಾಯಕ ನಿಯಂತ್ರಕ ಎಂ.ರತೀಶ್, ಇನ್ಸ್ ಪೆಕ್ಟರ್‍ಗಳಾದ ಕೆ.ಶಶಿಕಲಾ, ಕೆ.ಎಸ್.ರಮ್ಯಾ, ಆರ್.ಹರಿಕ್ಯಷ್ಣನ್, ಎಸ್.ವಿದ್ಯಾಧರನ್ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಯಿತು. ಉಪ ನಿಯಂತ್ರಕ ಪಿ.ಶ್ರೀನಿವಾಸ ಅವರ ತಪಾಸಣಾ ತಂಡದಲ್ಲಿ ಪಿ.ಶ್ರೀಜಿತ್, ಪಿ.ಕೆ.ಸೌಮ್ಯ, ಎ.ವಿನಯನ್, ಶಾಜಿಕುರುಕ್ಕಲ್ ವೀಥಿಲ್, ಪಿ.ಅಜಿತ್ ಕುಮಾರ್, ಕೆ.ಸೀತು ಪಾಲ್ಗೊಂಡಿದ್ದರು.