ಕುಂಬಳೆ: ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ಇವರ ಸಹಯೋಗದಲ್ಲಿ ದತ್ತಿನಿಧಿ ಪ್ರಶಸ್ತಿ ಪ್ರದಾನ ಹಾಗೂ ಕನ್ನಡ ಸಂಸ್ಕೃತಿ ಉತ್ಸವ ಜು.13 ರಂದು ಕಾಸರಗೋಡು ಸೀತಾಂಗೋಳಿ ಎಚ್.ಎ.ಎಲ್ ಸನಿಹದ ಅಲಯನ್ಸ್ ಕನ್ವೆನ್ಷನ್ ಸೆಂಟರ್‍ನಲ್ಲಿ ಜರಗಲಿದೆ. ಅಂದು ಬೆಳಿಗ್ಗೆ 9ಕ್ಕೆ ಸೀತಾಂಗೋಳಿ ಪೇಟೆಯಿಂದ ಆರಂಭಗೊಳ್ಳುವ ಭವ್ಯಶೋಭಾಯಾತ್ರೆಗೆ ಪುತ್ತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷರು ಸುಬ್ಬಣ್ಣ ಆಳ್ವ ಚಾಲನೆ ನೀಡುವರು.
ನಂತರ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನಸಭಾ ಅಧ್ಯಕ್ಷ ಯು.ಟಿ ಖಾದರ್ ಫರೀದ್ ಸಮಾರಂಭ ಉದ್ಘಾಟಿಸುವರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲ್ಯೂಜೆ)ದ ಕರ್ನಾಟಕ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸುವರು. ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಅಧ್ಯಕ್ಷ ರವಿ ನಾಯ್ಕಾಪು ಪ್ರಾಸ್ತಾವಿಕ ಮಾತುಗಳನ್ನಾಡುವರು. ಎಡನೀರು ಮಠ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಆಶೀರ್ವಚನ ನೀಡುವರು. ಕೇಂದ್ರ ಪಶು ಸಂಗೋಪನೆ, ಮೀನುಗಾರಿಕೆ ಖಾತೆ ಸಹ ಸಚಿವ ಜಾರ್ಜ್ ಕುರಿಯನ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು.ಕರ್ನಾಟಕ ಸರಕಾರ ಅರಣ್ಯ ಸಚಿವರು ಈಶ್ವರ ಬಿ.ಖಂಡ್ರೆ ದತ್ತಿನಿಧಿ ಪ್ರಶಸ್ತಿ ಪ್ರದಾನ ಮಾಡುವರು. ಈ ಸಂದರ್ಭ ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪುರಸ್ಕೃತ ಉದ್ಯಮಿ ಕೆ. ಕೆ. ಶೆಟ್ಟಿ ಮತ್ತು ಅಂತರಾಷ್ಟ್ರೀಯ ಖ್ಯಾತಿಯ ವಾಸ್ತುಶಿಲ್ಪಿ ರವೀಂದ್ರ ಕುಮಾರ್ ಬೆಂಗಳೂರು ಇವರಿಗೆ ನಾಗರಿಕ ಸನ್ಮಾನ ನಡೆಯಲಿದೆ. ಕರ್ನಾಟಕ ವಿಧಾನ ಪರಿಷತ್ತು ಉಪಸಭಾಪತಿಗಳು ಎಂ. ಕೆ .ಪ್ರಾಣೇಶ್ ಇವರು ಸಾಧಕರನ್ನು ಸನ್ಮಾನಿಸಲಿರುವರು. ಕರ್ನಾಟಕ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ. ವಿ. ಪ್ರಭಾಕರ್ ಹಾಗೂ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನ ಮರದ ಕೃತಿಗಳನ್ನು ಬಿಡುಗಡೆಗೊಳಿಸುವರು. ಉದ್ಯಮಿ ಕುಳೂರುಕನ್ಯಾನ ಸದಾಶಿವ ಶೆಟ್ಟಿ, ಕುದುಕೋಳಿ ಹವ್ವಾ ಹಸನ್ ಫೌಂಡೇಶನ್ ಸಂಸ್ಥಾಪಕ ಅಬ್ದುಲ್ಲಾ ಮಾದು ಮೂಲೆ, ಸಂಸದ ರಆಜ್‍ಮೋಹನ್ ಉಣ್ಣಿತ್ತಾನ್, ಶಾಸಕರಾದಲೆನ್.ಎ ನೆಲ್ಲಿಕುನ್ನು, ಸಿ.ಎಚ್ ಕುಞಂಬು, ಎ.ಕೆ.ಎಂ ಅಶ್ರಫ್, ಜಿಪಂ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸದಸ್ಯರು ಗೌರವ ಅತಿಥಿಗಳಾಗಿ ಭಾಗವಹಿಸುವರು. ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ವಿವಿಧ ನೃತ್ಯ, ವಿಮಿಕ್ರಿ, ಗೀತಾ ಸಾಹಿತ್ಯ ಸಂಭ್ರಮ, ತಿರುವಾದಿರ, ನಾಟ್ಯ ವೈಭವ ಜರಗಲಿದೆ.
ದತ್ತಿನಿಧಿ ಪ್ರಶಸ್ತಿ:
ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್( ಬ್ರಹ್ಮೈಕ್ಯ ಎಡನೀರು ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ ಸ್ಮರಣಾರ್ಥ ಶ್ರೀ ಮಠದಿಂದ ನೀಡುವ ದತ್ತಿನಿಧಿ ಪ್ರಶಸ್ತಿ )ಚೇತನ ಬೆಳಗೆರೆ( ಅವ್ವಾ ಸೇವಾ ಟ್ರಸ್ಟ್ ಹುಬ್ಬಳ್ಳಿ ದತ್ತಿನಿದಿ ಪ್ರಶಸ್ತಿ), ಅಶೋಕ್ ಚಂದರಗಿ( ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಡಾ. ಸೋಮಶೇಖರ್ ನೀಡುವ ದತ್ತಿನಿದಿ ಪ್ರಶಸ್ತಿ), ಬಿ. ರವೀಂದ್ರ ಶೆಟ್ಟಿ(ಹವ್ವಾ ಹಸನ್ ಫೌಂಡೇಶನ್ ಕುದ್ಕೊಳಿ ಸಂಸ್ಥಾಪಕ ಅಬ್ದುಲ್ಲಾ ಮಾದು ಮೂಲೆ ನೀಡುವ ದತ್ತಿನಿಧಿ ಪ್ರಶಸ್ತಿ)ಜಿ.ಸುಬ್ರಾಯ ಭಟ್ (ಅನಿವಾಸಿ ಉದ್ಯಮಿ ಕಲಾಪೆÇೀಷಕ ಜೋಸೆಫ್ ಮಥಾಯಸ್ ನೀಡುವ ದತ್ತಿನಿಧಿ ಪ್ರಶಸ್ತಿ) ಇಬ್ರಾಹಿಂ ಅಡ್ಕಸ್ಥಳ(ಕೆ ವಿ ಆರ್ ಠ್ಯಾಗೋರ್ ಸ್ಮರಣಾರ್ಥ ಭಾಗ್ಯ ಠ್ಯಾಗೋರ್ ನೀಡುವ ದತ್ತಿ ನಿಧಿ ಪ್ರಶಸ್ತಿ )ವಾಲ್ಟರ್ ನಂದಳಿಕೆ(ಶತಾಯುಷಿ ಸ್ವಾತಂತ್ರ್ಯ ಹೋರಾಟಗಾರ ಮಾಜಿ ಸಚಿವ ಭೀಮಣ್ಣ ಖಂಡ್ರೆ ಇವರ ಹೆಸರಿನಲ್ಲಿ ದೀಪಕ್ ವಿ.ಕೆ ನೀಡುವ ದತ್ತಿನಿಧಿ ಪ್ರಶಸ್ತಿ), ಎಚ್.ಬಿ. ಮದನ್ ಗೌಡ(ಡಾ. ಸುಧಾಕರ್ ಶೆಟ್ಟಿ ಪುಣೆ, ಹಿರಿಯ ಮಕ್ಕಳ ತಜ್ಞ ನೀಡುವ ದತ್ತಿನಿಧಿ ಪ್ರಶಸ್ತಿ), ಮುಂಬಯಿ ಪತ್ರಕರ್ತ ನವೀನ್ ಕೆ. ಮೊಹಮ್ಮದ್ ಇಬ್ರಾಹಿಂ ಪಾರ ಸ್ಮರಣಾರ್ಥ ನ್ಯಾಯವಾದಿ ಇಬ್ರಾಹಿಂ ಖಲೀಲ್ ಅರಿಮಲ ನೀಡುವ ದತ್ತಿನಿಧಿ ಪ್ರಶಸ್ತಿ) ನಂದಕುಮಾರ್ ಹೆಗಡೆ( ಮೊಗರೊಡಿ ಗೋಪಾಲಕೃಷ್ಣ ಮೇಲಾಂಟ ಸ್ಮರಣಾರ್ಥ ಹರ್ಷ ಮೇಲಾಂಟ ನೀಡುವ ದತ್ತಿನಿಧಿ ಪ್ರಶಸ್ತಿ), ಹೆಚ್ ಟಿ. ಅನಿಲ್ ಮಡಿಕೇರಿ( ಉದ್ಯಮಿ ಸಮಾಜಸೇವಕ ಆಶ್ರಫ್ ಶಾ ಮಂತೂರು ನೀಡುವ ದತ್ತಿನಿಧಿ ಪ್ರಶಸ್ತಿ), ಸದಾನಂದ ಜೋಶಿ ಬೀದರ್(ನವಿ ಮುಂಬಯಿ ಧರ್ಮದರ್ಶಿಅಣ್ಣಿ ಸಿ.ಶೆಟ್ಟಿ ನೀಡುವ ದತ್ತಿನಿಧಿ ಪ್ರಶಸ್ತಿ), ದಿವಾಕರ ಬಿ. ಶೆಟ್ಟಿ ಕಾಪು(ಕೆ.ಯು ಡಬ್ಲ್ಯೂ ಜೆ. ರಾಜ್ಯ ಸಮಿತಿ ನೀಡುವ ದತ್ತಿನಿಧಿ ಪ್ರಶಸ್ತಿ) ಬಿ.ಪಿ. ಶೇಣಿ( ಕೆ.ಯು. ಡಬ್ಲ್ಯೂ ಜೆ ರಾಜ್ಯ ಸಮಿತಿ ನೀಡುವ ದತ್ತಿನಿದಿ ಪ್ರಶಸ್ತಿ)ಇವರಿಗೆ ಪ್ರದಾನ ಮಾಡಲಾಗುವುದು.