ಕಾಸರಗೋಡು: ರಾಜ್ಯದ ಉನ್ನತ ಶಿಕ್ಷಣ ವಲಯದ ಅಂತಾರಾಷ್ಟಿçÃಯ ಗುಣಮಟ್ಟ ತಪಾಸಣೆಯಲ್ಲಿ ಉತ್ತಮ ಸಾಧನೆ ತೋರಿಸಿಕೊಂಡು ಬಂದಿರುವುದು ಶ್ಲಾಘನೀಯ ಎಂಬುದಾಗಿ ಉನ್ನತ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಇಲಾಖೆ ಸಚಿವ ಡಾ. ಆರ್. ಬಿಂದು ತಿಳಿಸಿದ್ದಾರೆ.
ಅವರು ಲಾಲ್‌ಬಹದ್ದೂರ್ ಶಾಸ್ತಿç(ಎಲ್‌ಬಿಎಸ್) ಇಂಜಿನಿಯರಿAಗ್ ಕಾಲೇಜಿನಲ್ಲಿ ಎನ್‌ಬಿಎ ಅಕ್ರೆಡಿಟೇಶನ್ ಪ್ರಕಟಣೆ ಮತ್ತು ವಿವಿಧ ಯೋಜನೆಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಮೂಲಸೌಕರ್ಯ ವಿಸ್ತರಣೆ ಮತ್ತು ವಿಷಯದ ಗುಣಮಟ್ಟದ ಭರವಸೆಗಾಗಿ ನಾವು ಸಮಗ್ರ ಸುಧಾರಣೆಗಳನ್ನು ಜಾರಿಗೆ ತರುವಲ್ಲಿ ಸಮರ್ಥರಾಗಿದ್ದೇವೆ. ಉದ್ಯೋಗ ಮತ್ತು ಶಿಕ್ಷಣದ ಸೇತುವೆಯ ಮೂಲಕ ಕೌಶಲ್ಯ ಕೊರತೆಯ ಅಂತರ ಕಡಿಮೆ ಮಾಡುವುದರ ಜತೆಗೆ ನಿರುದ್ಯೋಗ ಸಮಸ್ಯೆ ಪರಿಹರಿಸಲು ಸಾಧ್ಯವಾಗಲಿದೆ. ಉನ್ನತ ಶಿಕ್ಷಣ ಕ್ಷೇತ್ರವು ವಿದ್ಯಾರ್ಥಿಗಳನ್ನು ವೃತ್ತಿ ಅವಕಾಶಗಳಿಗಾಗಿ ಸಿದ್ಧಪಡಿಸಲು ಸಂಶೋಧನಾ ಕೌಶಲ್ಯಗಳನ್ನು ಉತ್ತೇಜಿಸುವ ನವೀನ ವಿಧಾನಗಳನ್ನು ಆವಿಷ್ಕರಿಸಬೇಕಾಗಿದೆ. ಎಲ್‌ಬಿಎಸ್ ಅಧೀನದಲ್ಲಿನಡೆಯುತ್ತಿರುವ ಪ್ರಗತಿಪರ ಕಾರ್ಯಗಳಿಗೆ ಎಲ್ಲ ಬೆಂಬಲ ನೀಡುವುದಾಗಿ ಸಚಿವರು ತಿಳಿಸಿದರು.
ಶಾಸಕ ಸಿಎಚ್ ಶಾಸಕ ಕುಞಂಬು ಅಧ್ಯಕ್ಷತೆ ವಹಿಸಿದ್ದರು. ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಇಶಿತಾ ರಾಯ್,ಎಐಸಿಟಿಇ ಮಾರ್ಗದರ್ಶಕ ಡಾ. ರಮೇಶ್ ಉನ್ನಿಕೃಷ್ಣನ್ ಮುಖ್ಯ ಅತಿಥಿಯಾಘಿ ಭಾಗವಹಿಸಿದ್ದರು. ಮುಳಿಯಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪಿ.ವಿ.ಮಿನಿ, ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ರೈಜಾ ರಶೀದ್ ಮೊದಲಾದವರು ಉಪಸ್ಥಿತರಿದ್ದರು.