ನವದೆಹಲಿ: ದ್ವಿಪಕ್ಷೀಯ ಒಪ್ಪಂದದ ಭಾಗವಾಗಿ ಕಾರಾಗೃಹದಲ್ಲಿರುವ ಉಭಯ ದೇಶಗಳಿಗೆ ಸೇರಿದ ಮೀನುಗಾರರು ಮತ್ತು ನಾಗರಿಕರ ಮಾಹಿತಿಯನ್ನು ಒಳಗೊಂಡ ಪಟ್ಟಿಯನ್ನು ಭಾರತ ಮತ್ತು ಪಾಕಿಸ್ತಾನ ಪರಸ್ಪರ ವಿನಿಮಯ ಮಾಡಿಕೊಂಡಿವೆ.
ನವದೆಹಲಿ: ದ್ವಿಪಕ್ಷೀಯ ಒಪ್ಪಂದದ ಭಾಗವಾಗಿ ಕಾರಾಗೃಹದಲ್ಲಿರುವ ಉಭಯ ದೇಶಗಳಿಗೆ ಸೇರಿದ ಮೀನುಗಾರರು ಮತ್ತು ನಾಗರಿಕರ ಮಾಹಿತಿಯನ್ನು ಒಳಗೊಂಡ ಪಟ್ಟಿಯನ್ನು ಭಾರತ ಮತ್ತು ಪಾಕಿಸ್ತಾನ ಪರಸ್ಪರ ವಿನಿಮಯ ಮಾಡಿಕೊಂಡಿವೆ.
ಅಲ್ಲದೆ, ಭಾರತದ ಪ್ರಯತ್ನದಿಂದಾಗಿ 2014ರಿಂದ ಈವರೆಗೆ ಪಾಕಿಸ್ತಾನದ ಕಾರಾಗೃಹದಲ್ಲಿದ್ದ 2,639 ಭಾರತೀಯ ಮೀನುಗಾರರು ಮತ್ತು 71 ನಾಗರಿಕರು ಭಾರತಕ್ಕೆ ವಾಪಸ್ಸಾಗಿದ್ದಾರೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಇಲಾಖೆ ತಿಳಿಸಿದೆ.
ದ್ವಿಪಕ್ಷೀಯ ಒಪ್ಪಂದದ ಭಾಗವಾಗಿ ಪ್ರತಿ ವರ್ಷ ಜನವರಿ 1 ಮತ್ತು ಜುಲೈ ಒಂದರಂದು ಉಭಯ ದೇಶಗಳು ಈ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳುತ್ತವೆ.
ಪಾಕಿಸ್ತಾನ ಅಥವಾ ಪಾಕಿಸ್ತಾನದವರು ಇರಬಹುದು ಎನ್ನಲಾದ 366 ಪ್ರಜೆಗಳು ಮತ್ತು 86 ಮೀನುಗಾರರು ಭಾರತದ ಕಾರಾಗೃಹದಲ್ಲಿದ್ದಾರೆ ಎಂಬ ಪಟ್ಟಿಯನ್ನು ಭಾರತವು ಪಾಕಿಸ್ತಾನಕ್ಕೆ ನೀಡಿದೆ. ಅದೇ ರೀತಿ ಭಾರತದ ಪ್ರಜೆಗಳು ಅಥವಾ ಭಾರತದವರು ಎನ್ನಬಹುದಾದ 43 ನಾಗರಿಕರು ಮತ್ತು 211 ಮೀನುಗಾರರು ಪಾಕಿಸ್ತಾನದ ಕಾರಾಗೃಹದಲ್ಲಿದ್ದಾರೆ ಎಂಬ ಮಾಹಿತಿಯನ್ನು ಪಾಕಿಸ್ತಾನವು ಭಾರತದ ಜೊತೆ ಹಂಚಿಕೊಂಡಿದೆ ಎಂದು ತಿಳಿದುಬಂದಿದೆ.
ಈಗಾಗಲೇ ಶಿಕ್ಷೆಯನ್ನು ಪೂರ್ಣಗೊಳಿಸಿರುವ 185 ಭಾರತೀಯ ಮೀನುಗಾರರು ಮತ್ತು ನಾಗರಿಕರನ್ನು ಶೀಘ್ರವೇ ಭಾರತಕ್ಕೆ ಕಳುಹಿಸಬೇಕು. 47 ನಾಗರಿಕರು ಮತ್ತು ಮೀನುಗಾರರಿಗೆ ತತ್‌ಕ್ಷಣದಿಂದಲೇ ರಾಜತಾಂತ್ರಿಕ ನೆರವು ಕಲ್ಪಿಸಬೇಕು. ಜೊತೆಗೆ ಕಾರಾಗೃಹದಲ್ಲಿರುವ ಭಾರತೀಯರಿಗೆ ಭದ್ರತೆ ಸೇರಿ ವಿವಿಧ ಸೌಲಭ್ಯ ಕಲ್ಪಿಸಬೇಕು ಎಂದು ಭಾರತವು ಪಾಕಿಸ್ತಾನವನ್ನು ಒತ್ತಾಯಿಸಿದೆ.