ಭೋಪಾಲ್: ಮಧ್ಯಪ್ರದೇಶದ ಸೀಹೋರ್ ಜಿಲ್ಲೆಯ ಮಿಡ್‌ಘಾಟ್ ಬಳಿ ರೈಲು ಡಿಕ್ಕಿ ಹೊಡೆದ ಪರಿಣಾಮ ಗಾಯಗೊಂಡಿದ್ದ ಎರಡು ಹುಲಿಮರಿಗಳನ್ನು ಎ.ಸಿ ಬೋಗಿಯ ರೈಲಿನಲ್ಲಿ ಮಂಗಳವಾರ ಭೋಪಾಲ್‌ಗೆ ಕರೆತರಲಾಯಿತು.
ಭೋಪಾಲ್: ಮಧ್ಯಪ್ರದೇಶದ ಸೀಹೋರ್ ಜಿಲ್ಲೆಯ ಮಿಡ್‌ಘಾಟ್ ಬಳಿ ರೈಲು ಡಿಕ್ಕಿ ಹೊಡೆದ ಪರಿಣಾಮ ಗಾಯಗೊಂಡಿದ್ದ ಎರಡು ಹುಲಿಮರಿಗಳನ್ನು ಎ.ಸಿ ಬೋಗಿಯ ರೈಲಿನಲ್ಲಿ ಮಂಗಳವಾರ ಭೋಪಾಲ್‌ಗೆ ಕರೆತರಲಾಯಿತು.
'ರೈಲು ಡಿಕ್ಕಿ ಹೊಡೆದಿದ್ದರಿಂದ 9 ತಿಂಗಳ ಗಂಡುಮರಿಯೊಂದು ರೈಲು ಹಳಿಯ ಬಳಿ ಬಿದ್ದಿತ್ತು.
'ಸೋಮವಾರ ಹುಲಿಮರಿಗಳನ್ನು ರಕ್ಷಿಸುವ ಕಾರ್ಯಾಚರಣೆ ನಡೆಸುತ್ತಿದ್ದಾಗ ತಾಯಿಹುಲಿಯು ಘಟನಾ ಸ್ಥಳಕ್ಕೆ ಆಗಮಿಸಿ, ಅಡ್ಡಿ ಉಂಟುಮಾಡಿದ್ದರಿಂದ ಕಾರ್ಯಾಚರಣೆನ್ನು ಮುಂದೂಡಲಾಗಿತ್ತು. ಮಂಗಳವಾರ ಬೆಳಿಗ್ಗೆ ಮತ್ತೆ ಕಾರ್ಯಾಚರಣೆ ಆರಂಭಿಸಲಾಯಿತು' ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪಶುವೈದ್ಯರು ಮತ್ತು ಸತ್ಪುಡ ಹುಲಿ ಸಂರಕ್ಷಣಾ ಪ್ರದೇಶದ ಅಧಿಕಾರಿಗಳು ಎರಡು ಮರಿಗಳನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ಮುಖ್ಯಮಂತ್ರಿ ಮೋಹನ್ ಯಾದವ್ ಅವರ ನಿರ್ದೇಶನದಂತೆ ಪಶ್ಚಿಮ ಕೇಂದ್ರ ರೈಲ್ವೆಯು ಎ.ಸಿ ರೈಲಿನ ವ್ಯವಸ್ಥೆಯನ್ನು ಕಲ್ಪಿಸಿತ್ತು. ಹುಲಿಮರಿಗಳನ್ನು ರೈಲಿನಲ್ಲಿ ಭೋಪಾಲ್‌ನ ಕಮಲಾಪತಿ ರೈಲು ನಿಲ್ದಾಣಕ್ಕೆ ಕರೆತಂದು, ವನ ವಿಹಾರ ರಾಷ್ಟ್ರೀಯ ಉದ್ಯಾನದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
'ಔಷಧಗಳ ಪರಿಣಾಮದಿಂದ ಹುಲಿಮರಿಗಳ ಕಾಲುಗಳು ನಿಸ್ತೇಜಗೊಂಡಿದ್ದು, ಬುಧವಾರ ಹೆಚ್ಚಿನ ಚಿಕಿತ್ಸೆ ನೀಡಲಾಗಿದೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.