ಪುಣೆ: ಇಲ್ಲಿನ ಲೋನಾವಲಾ ವಲಯದ ಭುಶಿ ಅಣೆಕಟ್ಟೆ ಸಮೀಪದ ಜಲಪಾತದಲ್ಲಿ ಸೋಮವಾರ ಕೊಚ್ಚಿಹೋಗಿದ್ದ ಐವರ ಶವಗಳು ಪತ್ತೆಯಾಗಿವೆ. ನಾಲ್ಕು ವರ್ಷದ ಬಾಲಕನ ಶವವು ಕಡೆಯದಾಗಿ ಸೋಮವಾರ ಸಂಜೆ ಪತ್ತೆಯಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪುಣೆ: ಇಲ್ಲಿನ ಲೋನಾವಲಾ ವಲಯದ ಭುಶಿ ಅಣೆಕಟ್ಟೆ ಸಮೀಪದ ಜಲಪಾತದಲ್ಲಿ ಸೋಮವಾರ ಕೊಚ್ಚಿಹೋಗಿದ್ದ ಐವರ ಶವಗಳು ಪತ್ತೆಯಾಗಿವೆ. ನಾಲ್ಕು ವರ್ಷದ ಬಾಲಕನ ಶವವು ಕಡೆಯದಾಗಿ ಸೋಮವಾರ ಸಂಜೆ ಪತ್ತೆಯಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾನುವಾರ ಮಧ್ಯಾಹ್ನ ಮಹಿಳೆ ಹಾಗೂ ನಾಲ್ವರು ಮಕ್ಕಳು ಜಲಪಾತದಲ್ಲಿ ನೀರಿನ ಸೆಳೆತಕ್ಕೆ ಸಿಕ್ಕು ಕೊಚ್ಚಿಹೋಗಿದ್ದರು.
ಮೃತರನ್ನು ಶಹಿಸ್ತಾ ಲಿಯಾಖತ್ ಅನ್ಸಾರಿ (36), ಅಮಿನಾ ಅದಿಲ್ ಅನ್ಸಾರಿ (13), ಉಮೇರಾ ಅದಿಲ್ ಅನ್ಸಾರಿ (8) ಅದ್ನಾನ್ ಅನ್ಸಾರಿ ಮಮ್ತು ಮರಿಯಾ ಅನ್ಸಾರಿ (9) ಎಂದು ಗುರುತಿಸಲಾಗಿದೆ. ಈ ಎಲ್ಲವೂ ಪುಣೆಯ ಹದಪ್ಸರ್‌ನ ಸಯ್ಯದ್ ನಗರದ ನಿವಾಸಿಗಳು. 'ಸಂಬಂಧಿಗಳಾದ 16-17 ಜನರು ಜಲಪಾತದ ಬಳಿಗೆ ವಿಹಾರ ಹೋಗಿದ್ದರು. ಧಾರಾಕಾರ ಮಳೆಯ ಕಾರಣ ನೀರಿನ ಹರಿವು ಏಕಾಏಕಿ ಹೆಚ್ಚಾಗಿತ್ತು. ಇದು ಅರಿವಿಗೆ ಬರುವ ವೇಳೆಗೆ ಕೆಲವರು ಜಲಪಾತದ ಮಧ್ಯೆ ಸಿಕ್ಕಿಬಿದ್ದಿದ್ದರು. ಪಾರಾಗುವ ಯತ್ನ ಫಲಿಸಲಿಲ್ಲ. ರಭಸ ಹೆಚ್ಚಾದಂತೆ ಎಲ್ಲರೂ ಕೊಚ್ಚಿಹೋಗಿದ್ದರು.