ಪೆರುಂಬಾವೂರು: ಐದು ವರ್ಷ ಹರೆಯದ ಗೌರೀಶ್ ಎಂಬ ಪುಟ್ಟ ಬಾಲಕಗೆ ವಾಹನಗಳೆಂದರೆ ಎಲ್ಲಿಲ್ಲದ ಒಲವು.ಆದರದು ಇತರ ಮಕ್ಕಳಂತೆ ಕೇವಲ ವಾಹನ ವೀಕ್ಷಿಸುವಷ್ಟೇ ಮಟ್ಟಿನ ಪ್ರೀತಿಯಲ್ಲ. ರಸ್ತೆಯಲ್ಲಿ ಭಾರತೀಯ ವಾಹನವಾಗಲಿ ಅಥವಾ ವಿದೇಶಿ ನಿರ್ಮಿತ ವಾಹನವಾಗಲಿ ಕಂಡುಬಂದಾಗ, ಆತನ ಗಮನವು ಅದರ ಲೋಗೋದ ಕಡೆಗೆ ಗಮಿಸುತ್ತದೆ.
ಜಗತ್ತಿನ ಯಾವುದೇ ಕಾರು ತಯಾರಿಕಾ ಕಂಪನಿಯ ಲೋಗೋವನ್ನು ಗೌರೀಶ್ ಮನನ ಮಾಡಿಕೊಂಡಿದ್ದಾನೆ.
ಜಗತ್ತಿನ ಯಾವುದೇ ಕಾರಿನ ಲೋಗೋ ನೋಡಿದ ತಕ್ಷಣ ಕಾರಿನ ಹೆಸರನ್ನು ಹೇಳುವ ಸಾಮಥ್ರ್ಯ ಹೊಂದಿರುವ ಈ ಪುಟ್ಟ ಪ್ರತಿಭೆ ಇಂಡಿಯಾ ಬುಕ್ ಆಫ್ ರೆಕಾರ್ಡ್‍ಗೆ ಪಾತ್ರರಾಗಿದ್ದಾನೆ. ತೊಡಪ್ಪರಂ ವ್ಯಾಸವಿದ್ಯಾನಿಕೇತನ ಶಾಲೆಯಲ್ಲಿ ಯುಕೆಜಿ ಓದುತ್ತಿರುವ ಗೌರೀಶ್ ಲ್ಯಾಪ್‍ಟಾಪ್‍ನಲ್ಲಿ 1 ನಿಮಿಷ ಮೂವತ್ತು ಸೆಕೆಂಡುಗಳಲ್ಲಿ ಪ್ರದರ್ಶಿಸಲಾದ 110 ವಾಹನ ಬ್ರಾಂಡ್‍ಗಳನ್ನು ಗುರುತಿಸಿ ಬುಕ್ ಆಫ್ ರೆಕಾಡ್ರ್ಸ್ ಪಡೆದಿರುವನು.
ಇಂಡಿಯಾ ಬುಕ್ ಆಫ್ ರೆಕಾಡ್ರ್ಸ್ ಮುಖ್ಯ ಸಂಪಾದಕ ಡಾ. ಬಿಸ್ವರೂಪ್ ರಾಯ್ ಚೌಧರಿ ಅವರಿಂದ ಪ್ರಮಾಣಪತ್ರ ಮತ್ತು ಪದಕವನ್ನು ಪಡೆದಿರುವನು. ಪೆರುಂಬವೂರಿನಲ್ಲಿ ಟೀ ಅಂಗಡಿ ನಡೆಸುತ್ತಿರುವ ಮಾವೇಲಿಪಾಡಿ ಮಾಣಿಕ್ಕತ್ ನ ಭಾಗ್ಯನಾಥ್ ಮತ್ತು ಕೀರ್ತನಾ ದಂಪತಿಯ ಪುತ್ರ ಗೌರೀಶ್ ಗೆ ನಕ್ಷತ್ರಳೆಂಬ ಮೂರು ವರ್ಷದ ತಂಗಿಯೂ ಇದ್ದಾಳೆ.