ಪೆರ್ಲ: ನಾಪತ್ತೆಯಾಗಿದ್ದ ಯುವಕನ ಮೃತದೇಹ ಮನೆ ಸನಿಹದ ಬಾವಿಯಲ್ಲಿ ಪತ್ತೆಯಾಗಿದೆ. ಪೆರ್ಲ ಸನಿಹದ ಅಡ್ಕ ಕಿದೆಕ್ಕಾರ್ ಅಬ್ರಾಜೆ ನಿವಾಸಿ ಯತೀಶ (35)ಸಾವನ್ನಪ್ಪಿದ ಯುವಕ. ಇವರ ತಂದೆ ಕಿದೆಕ್ಕಾರು ಅಬ್ರಾಜೆ ನಿವಾಸಿ ಈಶ್ವರ ನಾಯ್ಕ(65)ಅಸೌಖ್ಯಪೀಡಿತರಾಗಿ ಸೋಮವಾರ ನಸುಕಿಗೆ ನಿಧನರಾಗಿದ್ದು, ಇದರಿಂದ ಯಶವಂತ ಮಾನಿಸಿಕವಾಗಿ ಕುಗ್ಗಿದ್ದರು. ಈಶ್ವರ ನಾಯ್ಕ ಅವರ ಅಂತ್ಯಕ್ರಿಯೆ ನಡೆಸಲು ಸಿದ್ಧತೆ ನಡೆಯುತ್ತಿದ್ದಂತೆ ಯತೀಶ ಮನೆಯಿಂದ ನಾಪತ್ತೆಯಾಗಿದ್ದರು. ಹುಡುಕಾಡುವ ಮಧ್ಯೆ ಮನೆ ಸನಿಹದ ಬಾವಿಯಲ್ಲಿ ಮೃತದೇಹ ಪತ್ತೆಯಾಗಿದೆ. ಈಶ್ವರ ನಾಯ್ಕ್ ಅವರ ಪತ್ನಿ ಪಾರ್ವತಿ ಈ ಹಿಂದೆ ನಿಧನರಾಗಿದ್ದು, ನಂತರ ಅಸೌಖ್ಯದಿಂದ ಹಾಸಿಗೆ ಹಿಡಿದಿದ್ದ ಈಶ್ವರ ನಾಯ್ಕ್ ಅವರನ್ನು ಮಗ ಯತೀಶ ನೋಡಿಕೊಂಡಿದ್ದರು.
ಯತೀಶ ಅವರ ಅನುಪಸ್ಥಿತಿಯಲ್ಲೇ ಈಶ್ವರನಾಯ್ಕ ಅವರ ಮೃತದೇಹದ ಅಂತ್ಯಕ್ರಿಯೆ ನಡೆಸಲಾಗಿತ್ತು. ಯತೀಶ ಅವರ ಮೊಬೈಲ್ ಫೆÇೀನ್, ಚಪ್ಪಲಿ ಮನೆಯಲ್ಲಿ ಪತ್ತೆಯಾಗಿತ್ತು. ಬಳಿಕ ಬದಿಯಡ್ಕ ಪೆÇಲೀಸ್ ಠಾಣೆಯಲ್ಲಿ ನಾಪತ್ತೆ ದೂರು ನೀಡಲಾಗಿತ್ತು. ಮಂಗಳವಾರ ಸಂಜೆ ಹುಡುಕಾಡಿದಾಗ ಯತೀಶರ ಮೃತದೇಹ ಮನೆ ಸಮೀಪದ ಜನವಾಸವಿಲ್ಲದ ಮನೆ ಸಮೀಪದ ಬಾವಿಯಲ್ಲಿ ಪತ್ತೆಯಾಗಿತ್ತು. ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಮೃತದೇಹವನ್ನು ಮೇಲೆತ್ತಿದ್ದಾರೆ. ಬದಿಯಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.