ಪೆರ್ಲ: ಎಣ್ಮಕಜೆ ಗ್ರಾ.ಪಂ.ಕುಟುAಬ ಆರೋಗ್ಯಕೇಂದ್ರ ಪೆರ್ಲದ ಆಶ್ರಯದಲ್ಲಿ ಗ್ರಾಮ ಪಂಚಾಯತಿಯ ಎಲ್ಲಾ ಜನರ ಜೀವನಶೈಲಿ ರೋಗ ನಿರ್ಣಯ ಕೈಗೊಳ್ಳುವ ಡಿಜಿಟಲೈಸ್ಡ್ ಸರ್ವೇ "ಶೈಲಿ-೨"ಗೆ ಗುರುವಾರ ಚಾಲನೆ ನೀಡಲಾಯಿತು.
ಪಂಚಾಯತಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್.ಜೆ.ಎಸ್ ಉದ್ಘಾಟಿಸಿದರು. ಪಂ.ಉಪಾಧ್ಯಕ್ಷೆ ರಮ್ಲ ಇಬ್ರಾಹಿಂ ಅಧ್ಯಕ್ಷತೆ ವಹಿಸಿದ್ದರು. ಪಂ.ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್, ಬ್ಲಾಕ್ ಪಂ.ಸದಸ್ಯ ಬಟ್ಟುಶೆಟ್ಟಿ, ಸಿಡಿಎಸ್ ಅಧ್ಯಕ್ಷೆ ಜಲಜಾಕ್ಷಿ ಮಾತನಾಡಿದರು.
ಕುಟುಂಬ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಗ್ರೀಷ್ಮ ಸ್ವಾಗತಿಸಿ, ಜೂನಿಯರ್ ಹೆಲ್ತ್ ಇನ್ಸ್ಪೆಕ್ಟರ್ ಬಿಜು ಇ.ಬಿ.ವಂದಿಸಿದರು. ಬಳಿಕ ಆಶಾ ಕಾರ್ಯಕರ್ತೆಯರಿಗಾಗಿ ತರಬೇತಿ ನಡೆಸಲಾಯಿತು. ಜ್ಯೂ.ಹೆಲ್ತ್ ಇನ್ಸ್ ಪೆಕ್ಟರ್ ಗೋಪನ್, ಮಂಗಲ್ಪಾಡಿ ಬ್ಲಾಕ್ ಪಿ.ಆರ್.ಓ ಸಂತೋಷ್ ಕುಂಬಳೆ ವಿಷಯ ಮಂಡಿಸಿದರು.