ಕಾಸರಗೋಡು: ಕಾಞಂಗಾಡಿನಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳಿಬ್ಬರು ಹೊಡೆದಾಡಿಕೊಂಡ ಪರಿಣಾಮ ಗಂಭೀರ ಗಾಯಗೊಂಡ ಕೈದಿಯನ್ನು ಪರಿಯರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯ ತೀವ್ರ ನಿಗಾ ವಿಭಾಗದಲ್ಲ ದಾಖಲಿಸಲಾಗಿದ್ದು, ತುರ್ತು ಶಸ್ತ್ರ ಚಿಕಿತ್ಸೆಗೆ ವೈದ್ಯರು ಸೂಚಿಸಿದ್ದಾರೆ. ಅಬಕಾರಿ ಬದಿಯಡ್ಕ ರೇಂಜ್ ವ್ಯಾಪ್ತಿಯಲ್ಲಿನ ಸಾರಾಯಿ ಸಾಗಾಟದ ಆರೋಪಿಯಾಗಿರುವ ಬೇಳ ಕಟ್ಟತ್ತಂಗಡಿ ನಿವಾಸಿ ಮನು ಚಿಕಿತ್ಸೆಯಲ್ಲಿರುವ ಆರೋಪಿ. ಪ್ರಕರಣಕ್ಕೆ ಸಂಬಂಧಿಸಿ ಇನ್ನೊಂದು ಪ್ರಕರಣದಲ್ಲಿ ಆರೋಪಿಯಾಗಿರುವ ವಿಚಾರಣಾಧಿನ ಕೈದಿ, ಮೈಲಾಟಿ ಪೂವಞÂಲ್ ನಿವಾಸಿ ಶರಣ್ ಎಂಬಾತನ ವಿರುದ್ಧ ಹೊಸದುರ್ಗ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಜಿಲ್ಲಾ ಜೈಲು ಅಧೀಕ್ಷಕ ವಿನೀತ್ ಎ. ಪಿಳ್ಳೆ ಅವರ ದಊರಿನ ಮೇರೆಗೆ ಈ ಕೇಸು ದಆಖಲಾಗಿದೆ.
ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿ ಶರಣ್‍ನನ್ನು ಬಂಧಿಸಲಾಗಿದ್ದು, ಜಿಲ್ಲಾ ಕಾರಾಗೃಹದಲ್ಲಿರಿಸಲಾಗಿದ್ದು, ಮಂಗಳವಾರ ಇವರಿಬ್ಬರ ಮಧ್ಯೆ ಕ್ಷುಲ್ಲಕ ವಿಷಯಕ್ಕೆ ಸಂಬಂಧಿಸಿ ವಾಗ್ವಾದ ನಡೆದಿದ್ದು, ನಂತರ ಶರಣ್ ಅಬಕಾರಿ ಪರಕರಣದ ವಿಚಾರಣಾಧೀನ ಕೈದಿ ಮನುವಿನ ತಲೆಯನ್ನು ಬಲವಾಗಿ ಗೋಡೆಗೆ ಜಜ್ಜಿದ್ದನು. ಗಂಭೀರ ಗಾಯಗೊಂಡು ಕುಸಿದು ಬಿದ್ದ ಮನುವನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಣ್ಣಪುಟ್ಟ ಗಾಯಗಳೊಂದಿಗೆ ಶರಣ್‍ನನ್ನೂ ಸ್ಥಳಿಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.