ಕಾಸರಗೋಡು: ನಗರದಲ್ಲಿ ಕಾರ್ಯಾಚರಿಸುತ್ತಿರುವ ಕಾಸರಗೋಡು ಸಹಕಾರಿ ಟೌನ್ ಬ್ಯಾಂಕ್ನ ನವೀಕೃತ ಕೇಂದ್ರ ಕಚೇರಿ ಕಟ್ಟಡವನ್ನು ಜುಲೈ 13ರಂದು ಬೆಳಗ್ಗೆ 10.30ಕ್ಕೆ ಕೇಂದ್ರ ಪಶು ಸಂಗೋಪನೆ, ಮೀನುಗಾರಿಕೆ ಖಾತೆ ಸಹಾಯಕ ಸಚಿವ ಜಾರ್ಜ್ ಕುರಿಯನ್ ಉದ್ಗಾಟಿಸುವರು.
ಬ್ಯಾಂಕ್ ಅಧ್ಯಕ್ಷ ವಕೀಲ ಎ.ಸಿ ಅಶೋಕ್ ಕುಮಾರ್ ಅಧ್ಯಕ್ಷತೆ ವಹಿಸುವರು. ಶಾಸಕ ಎನ್.ಎ.ನೆಲ್ಲಿಕುನ್ನು, ಸಹಕಾರ ಸಂಘ ಜಂಟಿ ರಿಜಿಸ್ಟ್ರಾರ್ ಶ್ರೀಮತಿ. ಲಸಿತಾ ಹಾಗೂ ಜಿಲ್ಲಾ ಸಂಘಚಾಲಕ್ ಕೆ.ಪ್ರಭಾಕರ ಮಾಸ್ಟರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸಹಕಾರ ಸಂಘದ ಸಹಾಯಕ ನಿಬಂಧಕ ಎ. ರವೀಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರ್, ಕೃಷಿ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಕೆ.ನೀಲಕಂಠನ್, ಕಾಸರಗೋಡು ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಸ್.ಜೆ.ಪ್ರಸಾದ್, ನಗರಸಭಾ ಸದಸ್ಯೆ ಶ್ರೀಲತಾ ಎಂ, ಸಹಕಾರ ಭಾರತಿ ರಾಜ್ಯ ಉಪಾಧ್ಯಕ್ಷ ಐತಪ್ಪ ಮವ್ವಾರ್ ಪಾಲ್ಗೊಳ್ಳುವರು.