ಕಾಸರಗೋಡು: ಹೈಕೋರ್ಟ್ ಮಧ್ಯಪ್ರವೇಶದ ನಡುವೆಯೂ ಸರ್ಕಾರ ಪಿಂಚಣಿ ನಿರಾಕರಿಸುತ್ತಿದೆ.ಕಾಸರಗೋಡು ಸರ್ಕಾರಿ ಕಾಲೇಜಿನ ಮಾಜಿ ಪ್ರಾಂಶುಪಾಲೆ ಎಂ. ರಮ ಅವರನ್ನು ಎಡ ಶಿಕ್ಷಕರ ಸಂಘಟನೆ ಹಾಗೂ ಎಸ್‍ಎಫ್‍ಐ ಬೇಟೆಯಾಡುತ್ತಿದ್ದು, ನಿವೃತ್ತಿ ಬಳಿಕದ ಪಿಂಚಣಿ ಲಭಿಸುವಲ್ಲಿ ಅಕ್ರಮಗಳು ನಡೆಯುತ್ತಿವೆ ಎಂದು ತಿಳಿದುಬಂದಿದೆ. ರಮ ಮಾಧ್ಯಮಗಳೊಂದಿಗೆ ಮಾತನಾಡಿ ಈಗಲೂ ಸರ್ಕಾರಿ ಕಾಲೇಜಲ್ಲಿ ರಾಜಕೀಯ ಅಕ್ರಮ ನಡೆಯುತ್ತಿದೆ ಎಂದಿರುವರು.
ಕಾಸರಗೋಡು ಸರಕಾರಿ ಕಾಲೇಜಿನ ಪ್ರಾಂಶುಪಾಲರಾಗಿದ್ದಾಗ ಎಸ್‍ಎಫ್‍ಐ ನಡೆಸುತ್ತಿದ್ದ ಅಪರಾಧ ಚಟುವಟಿಕೆಗಳನ್ನು ಪ್ರಶ್ನಿಸಿ ಸರ್ಕಾರ ಸೇಡಿನ ಕ್ರಮ ಕೈಗೊಂಡಿದೆ. ಪಿಂಚಣಿ ಬಗ್ಗೆ ಕೇಳಿದಾಗಲೆಲ್ಲ ಅರ್ಜಿ ಪರಿಶೀಲಿಸಲಾಗಿದೆ ಎಂಬ ಉತ್ತರವಷ್ಟೇ ನೀಡಲಾಗುತ್ತಿದೆ ಎಂದಿರುವರು.
ಮಾದಕ ದ್ರವ್ಯ ಸೇವಿಸಿ ಅನೈತಿಕ ಚಟುವಟಿಕೆ ನಡೆಸುತ್ತಿರುವ ಎಸ್‍ಎಫ್‍ಐಗಳನ್ನು ಪ್ರಾಂಶುಪಾಲರು ಪ್ರಶ್ನಿಸಿದ್ದರು. ಇದರ ಬೆನ್ನಲ್ಲೇ, ಎಸ್‍ಎಫ್‍ಐ ಮುಖಂಡರ ಒತ್ತಡಕ್ಕೆ ಸರ್ಕಾರ ಮಣಿದಿರುವುದಾಗಿ ರಮ ಆರೋಪಿಸಿದರು.
ಏಪ್ರಿಲ್ ಮೊದಲ ವಾರದಲ್ಲಿ, ಪಿಂಚಣಿ ವರ್ಗಾವಣೆ ಮತ್ತು ತಡೆಹಿಡಿಯುವಿಕೆಯನ್ನು ರದ್ದುಗೊಳಿಸಿ ಹೈಕೋರ್ಟ್ ಆದೇಶ ನೀಡಿತ್ತು. ನ್ಯಾಯಾಲಯದ ಆದೇಶದ ಪ್ರತಿಯೊಂದಿಗೆ ಮತ್ತೆ ಅರ್ಜಿ ಸಲ್ಲಿಸಿ ಮೂರು ತಿಂಗಳು ಕಳೆದರೂ ರಮಾರಿಗೆ ಪಿಂಚಣಿ ಲಭಿಸಿಲ್ಲ.
ಕೊನೆಯದಾಗಿ ಮಂಜೇಶ್ವರ ಸರ್ಕಾರಿ ಕಾಲೇಜಲ್ಲಿ ಕೆಲಸ ಮಾಡಿದ್ದರು. ರಮಾ ಅವರು ಪ್ರತಿ ವಾರ ಕಾಲೇಜಿಗೆ ಮತ್ತು ನಿರ್ದೇಶಕರಿಗೆ ಪತ್ರಗಳನ್ನು ಕಳುಹಿಸುತ್ತಿದ್ದಾರೆ. ಈ ದೂರನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ ಎಂಬುದು ಕಾಲೇಜು ನಿರ್ದೇಶನಾಲಯದಿಂದ ಅಂತಿಮ ಉತ್ತರವಾಗಿದೆ.
ಎಲ್ಲಾ ವಾದಗಳು ಮತ್ತು ಪುರಾವೆಗಳು ತನ್ನ ಪರವಾಗಿದ್ದರೂ ಯಾವ ಶಿಕ್ಷಕರೂ ತನ್ನ ಪರವಾಗಿ ಸಹಕರಿಸುತ್ತಿಲ್ಲ. ಎಸ್‍ಎಫ್‍ಐಗೆ ಬೆಂಬಲ ನೀಡಲು ಕೆಲವು ಶಿಕ್ಷಕರು ಸುಳ್ಳು ಹೇಳಿದ್ದಾರೆ ಎಂದು ರಮಾ ಮಲೆಯಾಳಂ ಮಾಧ್ಯಮವೊಂದಕ್ಕೆ ಇಂದು ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.