ಪುಣೆ: ವಿವಾದಿತ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರ ಐಷಾರಾಮಿ ಮನೆಯ ಪಕ್ಕದಲ್ಲಿದ್ದ ಅಕ್ರಮ ಕಟ್ಟಡವನ್ನು ಪುಣೆ ಮಹಾನಗರ ಪಾಲಿಕೆಯು ಬುಧವಾರ ತೆರವುಗೊಳಿಸಿದೆ.
ಪುಣೆ: ವಿವಾದಿತ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರ ಐಷಾರಾಮಿ ಮನೆಯ ಪಕ್ಕದಲ್ಲಿದ್ದ ಅಕ್ರಮ ಕಟ್ಟಡವನ್ನು ಪುಣೆ ಮಹಾನಗರ ಪಾಲಿಕೆಯು ಬುಧವಾರ ತೆರವುಗೊಳಿಸಿದೆ.
ಅಕ್ರಮವಾಗಿ ನಿರ್ಮಿಸಲಾಗಿರುವ ಕಟ್ಟಡ ತೆರವುಗೊಳಿಸುವಂತೆ ವಿವಾದಿತ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರ ಕುಟುಂಬಕ್ಕೆ ಸೂಚಿಸಿ, ಜುಲೈ 13ರಂದು ನೋಟಿಸ್ ನೀಡಲಾಗಿತ್ತು.
ಈ ಕುರಿತು ಬುಧವಾರ ಪ್ರತಿಕ್ರಿಯಿಸಿದ ಪುಣೆ ಮಹಾನಗರ ಪಾಲಿಕೆಯ ಹಿರಿಯ ಅಧಿಕಾರಿಯೊಬ್ಬರು, 'ಏಳು ದಿನಗಳಲ್ಲಿ ಅಕ್ರಮ ಕಟ್ಟಡ ತೆರವುಗೊಳಿಸುವಂತೆ ಸೂಚಿಸಿ ಅವರ ಕುಟುಂಬಕ್ಕೆ (ಖೇಡ್ಕರ್) ಸೂಚಿಸಲಾಗಿತ್ತು. ಒಂದು ವೇಳೆ ವಿಫಲವಾದಲ್ಲಿ, ಪುಣೆ ಮಹಾನಗರವೇ ಅದನ್ನು ತೆರವುಗೊಳಿಸಲಿದೆ. ಅದಕ್ಕೆ ತಗುಲುವ ವೆಚ್ಚವನ್ನು ಅವರಿಂದ ಭರಿಸಲಾಗುವುದು ಎಂಬುದಾಗಿ ನೋಟಿಸ್‌ನಲ್ಲಿ ತಿಳಿಸಲಾಗಿತ್ತು' ಎಂದಿದ್ದಾರೆ.