ಬದಿಯಡ್ಕ: ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಕಾಸರಗೋಡು ಜಿಲ್ಲೆಯ ೨೦೨೪-೨೬ ರ ಸಾಲಿನ ನೂತನ ಪದಾಧಿಕಾರಿಗಳಾಗಿ ಆಯ್ಕೆಯಾದ ಜಿಲ್ಲಾ ನೇತಾರರನ್ನು ಬದಿಯಡ್ಕ ಮೆರ್ಚೆಂಟ್ಸ್ ಇಂಡಸ್ಟ್ರೀಯಲಿಸ್ಟ್ ಅಸೋಸಿಯೇಷನಿನ ವತಿಯಿಂದ ಅಭಿನಂದಿಸುವ ಕಾರ್ಯಕ್ರಮ ಬದಿಯಡ್ಕ ಘಟಕ ಅಧ್ಯಕ್ಷ ನರೇಂದ್ರ ಬಿ ಅವರ ಅಧ್ಯಕ್ಷತೆಯಲ್ಲಿ ಬದಿಯಡ್ಕ ಮನುಕುಲ ಸಭಾಭವನದಲ್ಲಿ ನಡೆಯಿತು.
ಅಭಿನಂದನಾ ಸಭೆಯನ್ನು ಜಿಲ್ಲಾ ಅಧ್ಯಕ್ಷ ಅಹಮದ್ ಶರೀಫ್ ಉದ್ಘಾಟಿಸಿದರು. ಮಾಹಿನ್ ಕೋಳಿಕ್ಕÀರ, ರೌಫು ಪಳ್ಳಿಕ್ಕಲ್, ಸಿಯಾನ್ ಉಸ್ಮಾನ್, ಕುಂಜಾರ್ ಮೊಹಮ್ಮದ್ ಹಾಜಿ, ದಾಮೋದರನ್, ದಿನೇಶನ್, ಅನ್ವರ್ ಸಾದತ್, ಮುಳ್ಳೇರಿಯ ಘಟಕದ ಅಧ್ಯಕ್ಷ ಗಣೇಶ್ ವತ್ಸ, ಪೆರ್ಲ ಘಟಕದ ಅಧ್ಯಕ್ಷ ರಾಜಾರಾಂ ಶೆಟ್ಟಿ, ನಾರಂಪಾಡಿ ಘಟಕದ ಅಧ್ಯಕ್ಷ ಶ್ರೀಧರನ್, ನೀರ್ಚಾಲು ಘಟಕದ ಅಧ್ಯಕ್ಷ ಸುಬ್ರಹ್ಮಣ್ಯ ಎಂ ಎಂಬವರನ್ನು ಬದಿಯಡ್ಕ ಘಟಕದ ಪರವಾಗಿ ಅಭಿನಂದಿಸಲಾಯಿತು. ಬದಿಯಡ್ಕ ಘಟಕದ ಕಾರ್ಯದರ್ಶಿ ರವಿ ನವಶಕ್ತಿ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಉದಯಶಂಕರ ವಂದಿಸಿದರು. ಕೋಶಾಧಿಕಾರಿ ಜ್ಞಾನದೇವ ಶೆಣೈ ನಿರೂಪಿಸಿದರು.